ಸಂವಿಧಾನ ಡಾ.ಬಿ.ಆರ್​.ಅಂಬೇಡ್ಕರ ನೀಡಿದ ವರದಾನ; ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ

26-RNR-11
Published on

ಹಾವೇರಿ: ಸಂವಿಧಾನವು ಡಾ. ಬಿ.ಆರ್​. ಅಂಬೇಡ್ಕರ್​ ನಮಗೆ ನೀಡಿದ ವರದಾನವಾಗಿದೆ. ಸಂವಿಧಾನ ಸಮಾಜದ ಎಲ್ಲ ವರ್ಗದವರನ್ನು ಸಮಾನ ರೀತಿಯಲ್ಲಿ ಕಾಣುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಹೇಳಿದರು.

ನಗರದ ಜಿಲ್ಲಾ ವಕೀಲರ ಸಂಘದ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಅಭಿಯೋಜನಾ ಇಲಾಖೆ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸಂವಿಧಾನದಡಿ ಕಾರ್ಯನಿರ್ವವಹಿಸಿದರೆ ಸಮಾಜ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ. ಕಾನೂನಿನ ನೆರವಿನ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಪಕಿರ್ಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎಸ್​.ಎಚ್​. ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ವಿ.ಕೆ. ಕುಲಕಣಿರ್ ಸಂವಿಧಾನ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.

ನ್ಯಾಯಾಧೀಶರಾದ ಜಿ.ಎಲ್​. ಲಕ್ಷಿ$್ಮನಾರಾಯಣ, ಎಂ.ಜಿ. ಶಿವಳ್ಳಿ, ನಿಂಗೌಡ ಪಾಟೀಲ, ಪ್ರಕಾಶ ವಿ., ಬಿ.ಆರ್​. ಮುತಾಲಿಕದೇಸಾಯಿ, ರವಿಪ್ರಕಾಶ ಟಿ. ಅವಿನ್​, ಬಿಪಿನ್​ ಎಚ್​.ಎಂ., ಜಿಲ್ಲಾ ವಕೀಲರ ಸಂಘದ ಕಾರ್ಯದಶಿರ್ ಪಿ.ಎಸ್​. ಹೆಬ್ಬಾಳ, ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಗೆಜ್ಜಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net