ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಲಿ

24 oct tnp 01
ತಿ.ನರಸೀಪುರ ತಾಲೂಕಿನ ಚೌಹಳ್ಳಿ ಗ್ರಾಮದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಂಡ ಕೆರೆಗೆ ಬಾಗಿನ ಅರ್ಪಿಸಲಾಯಿತು. ಬಿ.ಜಯರಾಮ ನೆಲ್ಲಿತ್ತಾಯ, ವಿಜಯಕುಮಾರ್ ನಾಗನಾಳ, ಹನುಮಂತಪ್ಪ ಅಂಗಡಿ, ಕೆ.ಎನ್.ಪ್ರಭುಸ್ವಾಮಿ, ಕಿರಗಸೂರು ಶಂಕರ್, ಪ್ರಸಾದ್ ನಾಯಕ, ಆಲಗೂಡು ನಾಗರಾಜು ಇತರರು ಇದ್ದರು.
Published on

ಬಿ.ಜಯರಾಮ್ ನೆಲ್ಲಿತ್ತಾಯ ಅಭಿಮತ

ತಿ.ನರಸೀಪುರ :ಒಂದೊಂದು ಊರಲ್ಲಿ ನೀರಿಗೆ ಆಶ್ರಯ ನೀಡುವ ಕೆರೆಯೊಂದು ಇದ್ದರೆ ಜನ ಜಾನುವಾರುಗಳು ಸೇರಿದಂತೆ ಪಕ್ಷಿಸಂಕುಲ ಹಾಗೂ ವನ್ಯಜೀವಿಗಳು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ಹೇಳಿದರು.

ತಾಲೂಕಿನ ಚೌಹಳ್ಳಿ ಗ್ರಾಮದ ಬಳಿ ತಲಕಾಡು ಹೆಮ್ಮಿಗೆ ಮುಖ್ಯ ರಸ್ತೆಯಲ್ಲಿ ಇತ್ತೀಚೆಗೆ ಸರ್ಕಾರಿ ಕಟ್ಟೆ ಕೆರೆಯಲ್ಲಿ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಾದಾಪುರ ಗ್ರಾಮ ಪಂಚಾಯಿತಿ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಂಡ 633ನೇ ಕೆರೆಯ ಹಸ್ತಾಂತರ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಣಿಪಕ್ಷಿಗಳಿಗೆ ಜೀವಜಲವಾಗುವ ಕೆರೆಗಳು ಆವಾಸಸ್ಥಾನವಾಗಿವೆ. ಹಾಗಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಿ, ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಹಿರಿಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಕೆರೆಗಳನ್ನು ಉಳಿಸಿ ಬೆಳೆಸುವುದರಿಂದ ಅಂತರ್ಜಲ ಅಭಿವೃದ್ಧಿಯಾಗಿ ಜಲಮೂಲಗಳು ಅಭಿವೃದ್ಧಿಯಾಗಲಿದ್ದು, ರೈತರ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಂಡ 633ನೇ ಕೆರೆ ಚೌಹಳ್ಳಿ ಗ್ರಾಮದ ಕೆರೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ ಮಾತನಾಡಿ, ಕೆರೆಗಳ ಪುನಶ್ಚೇತನದಿಂದ ಬೇಸಿಗೆ ಕಾಲದಲ್ಲಿ ಜಾನುವಾರುಗಳು ಸೇರಿದಂತೆ ಪಕ್ಷಿ, ಕಾಡು ಪ್ರಾಣಿಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಸಹಕಾರಿಯಾಗಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಜೀವಸಂಕುಲಗಳ ಸಂರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ತ್ರಿಪುರ, ಇಂಜಿನಿಯರ್ ಪುಷ್ಪರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಮಿರಾವ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಗಿರೀಶ್, ಸದಸ್ಯರಾದ ಎಸ್.ಮಲ್ಲೇಶ್, ರಾಚಯ್ಯ ಕುಳ್ಳಪ್ಪ, ರಾಜೇಶ್, ನಂಜುಂಡಸ್ವಾಮಿ, ರೈತ ಮುಖಂಡರಾದ ಕಿರಗಸೂರು ಶಂಕರ್, ಪ್ರಸಾದ್ ನಾಯಕ, ಆಲಗೂಡು ನಾಗರಾಜು, ಬಸವ ತತ್ವಗಳ ಪ್ರಚಾರಕ ನಿಂಗರಾಜಪ್ಪ, ಸುವರ್ಣ ಮರಿಸ್ವಾಮಿ, ಕೃಷಿ ಮೇಲ್ವಿಚಾರಕ ಟಿ.ಆರ್.ಕುಮಾರ್, ವಲಯ ಮೇಲ್ವಿಚಾರಕಿ ಜ್ಯೋತಿ, ಸೇವಾ ಪ್ರತಿನಿಧಿಗಳಾದ ಮಹದೇವಮ್ಮ, ಮಂಜುಳಾ, ಚಿನ್ನಸ್ವಾಮಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net