ಹಿಂದೂ ರಾಷ್ಟ್ರದ ಸ್ಥಾಪನೆಗೆ ಒಮ್ಮನಸ್ಸಿನ ಸಂಘಟನೆ ಅಗತ್ಯ

 ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬಂಟ್ವಾಳದಲ್ಲಿ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ ಕಾರ್ಯಕ್ರಮ ನೆರವೇರಿತು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬಂಟ್ವಾಳದಲ್ಲಿ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ ಕಾರ್ಯಕ್ರಮ ನೆರವೇರಿತು.
Published on
ಮಂಗಳೂರು: ಶ್ರೀರಾಮನು ರಾವಣನ ವಧೆ ಮಾಡಿ ಅಯೋಧ್ಯೆಗೆ ಹಿಂದಿರುಗಿದಾಗ ರಾಮರಾಜ್ಯ ಸ್ಥಾಪನೆಯಾದಂತೆ, ನಮ್ಮ ಸಮಾಜವು ಧರ್ಮವನ್ನು ಅರಿತು ಸಾತ್ವಿಕರಾದರೆ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ. ಹಿಂದೂ ರಾಷ್ಟ್ರದ ಸ್ಥಾಪನೆಗೆ ಒಮ್ಮನಸ್ಸಿನ ಸಂಘಟನೆ ಅಗತ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಸಮನ್ವಯಕ ಚಂದ್ರ ಮೊಗವೀರ ಹೇಳಿದರು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬಂಟ್ವಾಳದಲ್ಲಿ ನಡೆದ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ರಾಷ್ಟ್ರ ಅಧಿವೇಶನದ ಕಾರ್ಯಗಳು ಇಂದು ಹೆಮ್ಮರವಾಗಿ ಬೆಳೆಯುತ್ತಿವೆ. ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ, 2025ರ ಕುಂಭಮೇಳದಲ್ಲಿ ಸಂತ ಮಹಾತ್ಮರು ಸೇರಿ ಹಿಂದೂ ರಾಷ್ಟ್ರದ ಕರಡು ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ. ಇಂದು ದೇಶದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಧರ್ಮ ಕಾರ್ಯದ ಹಾದಿಯಲ್ಲಿ ಬರುವ ಅಡೆತಡೆಗಳನ್ನು ಎದುರಿಸಲು ನಾವೆಲ್ಲರೂ ಸಾಧನೆ ನಡೆಸಿ ಕೈಜೋಡಿಸಬೇಕು ಎಂದರು.
ವಕೀಲ ಪ್ರಸಾದ್ ರೈ ಮಾತನಾಡಿ, ಲವ್ ಜಿಹಾದ್ ಎಂಬ ವಿಷ ಸರ್ವತ್ರ ಹರಡುತ್ತಿದ್ದು, ಭಾರತ ಮತ್ತು ಹಿಂದೂ ಧರ್ಮವನ್ನು ನಾಶ ಮಾಡುವುದೇ ಇದರ ಮೂಲ ಉದ್ದೇಶ. ಧರ್ಮದ ಆಧಾರ ಸ್ತಂಭವಾಗಿರುವ ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ-ಪ್ರೇಮದ ನಾಟಕ ಹಾಗೂ ವೇಷಾಂತರಗಳ ಮಾಯಾ ಜಾಲಕ್ಕೆ ಸಿಲುಕಿಸಿ ಈ ಷಡ್ಯಂತ್ರ ನಡೆಸಲಾಗುತ್ತಿದೆ. ಯಾವುದೇ ಜಿಹಾದ್‌ಗಳಿಗೆ ಬಲಿಯಾಗದೆ ನಮ್ಮ ಸ್ವಯಂ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದರು.
ಗುರುಪುರ ವಜ್ರದೇಹಿಮಠದ ಪೀಠಾಧಿಪತಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಉದ್ಯಮಿ ಅಜಯ್ ಶೆಟ್ಟಿ, ಸನಾತನ ಸಂಸ್ಥೆಯ ಸಂತ ಸಾಂತಪ್ಪ ಗೌಡ, ಮಂಗಳೂರಿನ ವಕೀಲ ಜಗದೀಶ ಶೇಣವ, ಪ್ರಮುಖರಾದ ಪ್ರಭಾಕರ ಪ್ರಭು,, ರಾಧಾಕೃಷ್ಣ ಅಡ್ಯಾಂತಾಯ, ಶಿವಾನಂದ ಸರಸ್ವತಿ ಸ್ವಾಮೀಜಿ, ರಾಜ ರಾಮ್ ಭಟ್ ಸೇರಿದಂತೆ ಹಲವರು ಇದ್ದರು. ಸುಧಾ ತಲಪಾಡಿ ಹಾಗೂ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಗಳು ಸ್ವಾರ್ಥ ಚಿಂತನೆಗಳನ್ನು ಬಿಟ್ಟು ನಿಸ್ವಾರ್ಥವಾಗಿ ಬದುಕಬೇಕಿದೆ. ದೇಶ ಮತ್ತು ಧರ್ಮದ ರಕ್ಷಣೆಗಾಗಿ ಕುಟುಂಬದ ರಕ್ಷಣೆ ಮುಖ್ಯವಾಗಿದ್ದು, ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸತ್ ಕುಟುಂಬದಿಂದಲೇ ಉತ್ತಮ ರಾಷ್ಟ್ರದ ಸ್ಥಾಪನೆ ಸಾಧ್ಯ. ವಿದೇಶದಿಂದ ಭಾರತಕ್ಕೆ ಜ್ಞಾನ ಹುಡುಕಿಕೊಂಡು ಬರುವುದೇ ನಮ್ಮ ಧರ್ಮದ ಶ್ರೇಷ್ಠತೆಗೆ ಸಾಕ್ಷಿ. ಇತಿಹಾಸದ ಪುಸ್ತಕಗಳಲ್ಲಿ ಈ ಸತ್ಯಗಳು ಮಾಯವಾಗಿದ್ದರೂ ಸತ್ಯಕ್ಕೆ ಎಂದಿಗೂ ನಾಶವಿಲ್ಲ.
-ಶ್ರೀ ರಾಜಶೇಖರಾನಂದ ಸ್ವಾಮೀಜಿ,
ಗುರುಪುರ ವಜ್ರದೇಹಿಮಠದ ಪೀಠಾಧಿಪತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net