ಪ್ರಣಬ್​ ಮುಖರ್ಜಿ ಪಿಎಂ ಆಗಿದ್ರೆ ಕಾಂಗ್ರೆಸ್ ಇಷ್ಟು ಹೀನಾಯವಾಗಿ ಸೋಲುತ್ತಿರಲಿಲ್ಲ; ಅಯ್ಯರ್​ | Congress

by (23)
Published on

ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿಯಾಗಿದ್ದ ಪ್ರಣಬ್​​ ಮುಖರ್ಜಿ ಅವರನ್ನು 2012ರಲ್ಲಿ ಪ್ರಧಾನಿ ಮಾಡಬೇಕಿತ್ತು ಎಂದು ಕಾಂಗ್ರೆಸ್(Congress)​ ಹಿರಿಯ ಮುಖಂಡ ಮತ್ತು ಮಾಜಿ ವಿದೇಶಾಂಗ ಸಚಿವ ಮಣಿ ಶಂಕರ್​ ಅಯ್ಯರ್​ ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಭಾನುವಾರ ಮಾತನಾಡಿದ್ದಾರೆ.

''2012ರಲ್ಲಿ ಪ್ರಣಬ್​ ಮುಖರ್ಜಿಯನ್ನು ರಾಷ್ಟ್ರಪತಿಯಾಗಿ ನೇಮಿಸಿದಾಗ ರಾಜಕೀಯ ಪರಿಸ್ಥಿತಿಯನ್ನು ನೆನಪು ಮಾಡಿಕೊಂಡ ಆಯ್ಯರ್​, ಜಗ್ಗರ್​ನಾಟ್​ ಪ್ರಕಟಿಸಿರುವ ತನ್ನ ಮುಂಬರುವ ಪುಸ್ತಕ 'ಎ ಮೆವರಿಕ್​ ಇನ್​ ಪಾಲಿಟಿಕ್ಸ್​' ಪುಸ್ತಕದಲ್ಲಿ ವಿಚಾರಗಳನ್ನು ಮುಂದುಟ್ಟಿದ್ದಾರೆ''.

''ನೀವು ಬೇಕಾದರೆ ನೋಡಿ 2012ರಲ್ಲಿ ಎರಡು ಪರಿಸ್ಥಿತಿಗಳನ್ನು ಅನುಭವಿಸಿದ್ದೇವೆ. ಹೌದು, ಸೋನಿಯಾ ಗಾಂಧಿ ಅವರು ತುಂಬಾ ಅನಾರೋಗಕ್ಕೆ ತುತ್ತಾಗಿದ್ದರು. ಅಲ್ಲದೆ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಅವರಿಗೆ ಕೂಡ 6 ಬೈಪಾಸ್​ ಸರ್ಜರಿ ನಡೆದ್ದಿದ್ದವು. ಅಂದಿನ ಪರಿಸ್ಥಿತಿಯಲ್ಲಿ ಪಕ್ಷದ ಮುಖ್ಯಸ್ಥರು ಮತ್ತು ಸರ್ಕಾರದ ಮುಖ್ಯಸ್ಥರು ಸೇರಿದಂತೆ ಎಲ್ಲಾರು ವಿಶೇಷಚೇತನರಂತೆ ಭಾಸವಾಗಿತ್ತು. ಆದರೆ, ಈ ಎಲ್ಲರ ನಡುವೆ ಪ್ರಣಬ್​ ಮುಖರ್ಜಿ ಮಾತ್ರ ಒಳ್ಳೆಯ ಶಕ್ತಿ, ಆಲೋಚನೆ ಮತ್ತು ನಿರ್ದಿಷ್ಟ ಪ್ರಮಾಣದ ವರ್ಚಸ್ಸು ಅನ್ನು ಹೊಂದಿದ್ದರು. ಅಂದಿನ ಪರಿಸ್ಥಿಯಲ್ಲಿ ಪಕ್ಷವನ್ನು ಮತ್ತು ಸರ್ಕಾರವನ್ನು ನಡೆಸಬಲ್ಲ ತಾಕತ್ತು ಪ್ರಣಬ್​ ಅವರಿಗೆ ಇತ್ತು'' ಎಂದು ಅಯ್ಯರ್​ ಹೇಳಿದ್ದಾರೆ.

"ಇದು ಈಗ ಮುಗಿತ ಕಥೆ ಆದರೆ, ಡಾ.ಮನಮೋಹನ್ ಸಿಂಗ್ ರಾಷ್ಟ್ರಪತಿಯಾಗಿದ್ದರೆ ಮತ್ತು ಪ್ರಣಬ್ ಪ್ರಧಾನಿಯಾಗಿದ್ದರೆ, ನಾವು 2014 ರಲ್ಲಿ (ಲೋಕಸಭಾ ಚುನಾವಣೆಯಲ್ಲಿ) ಸೋಲುತ್ತಿದ್ದೆವು. ಆದರೆ, ಇಂತಹ ಭಾರಿ ಅವಮಾನಕರ ಸೋಲು ಅನುಭವಿಸುತ್ತಿರಲಿಲ್ಲ'' ಎಂದು ಅಯ್ಯರ್​ ಹೇಳಿದ್ದಾರೆ.(ಏಜೆನ್ಸಿಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net