ಮುನಿರತ್ನ ಮೇಲೆ ಮೊಟ್ಟೆ ಎಸೆದ ಕಾಂಗ್ರೆಸ್​ ಕಾರ್ಯಕರ್ತರು: ಇದು ಡಿಕೆ ಬ್ರದರ್ಸ್​ ಕೈವಾಡ ಎಂದ ಬಿಜೆಪಿ ಶಾಸಕ | BJP MLA

b805ec1e-48ba-4a41-a02a-b910a8d323cf
Published on

ಬೆಂಗಳೂರು:ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ(BJP MLA)ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿರುವ ಘಟನೆ ಬುಧವಾರ ಬೆಂಗಳೂರಿನಲ್ಲಿ ನಡೆದಿದೆ.

ಇಲ್ಲಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಜಪೇಯಿ ಜನ್ಮದಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಶಾಸಕ ಮುನಿರತ್ನ ಕಾರಿನ ಮೇಲೆ ಮತ್ತು ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ.  ಮೊಟ್ಟೆ ಎಸೆದ ಬಳಿಕ ಹಲ್ಲೆ ಯತ್ನಿಸಿದ್ದಾರೆ ಎನ್ನುವ ಅರೋಪವೂ ಕೇಳಿಬಂದಿದೆ.

ಘಟನೆ ಖಂಡಿಸಿದ ಶಾಸಕ ಮುನಿರತ್ನ, ಈ ಘಟನೆ ಹಿಂದೆ ಡಿ.ಕೆ. ಶಿವಕುಮಾರ್​. ಡಿ.ಕೆ.ಸುರೇಶ್​ ಮತ್ತು ಕುಸುಮಾ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಬಳಿಕ ಬೆಂಬಲಿಗರ ಜತೆ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net