ದಾವೆ ಹೂಡಿದರೆ ಕಾಂಗ್ರೆಸ್ ಮಾನ ಹರಾಜು: ಸಿ.ಟಿ.ರವಿ ಹೇಳಿಕೆ | Cong govt failure

7 ckm 7 c.t.ravi
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
Published on

ಬೆಂಗಳೂರು: ರಾಜ್ಯ ಸರ್ಕಾರದ ವೈಲ್ಯಗಳನ್ನು ಬಿಂಬಿಸುವ ಬಿಜೆಪಿ ಚಾರ್ಜ್‌ಶೀಟ್ ವಿರುದ್ಧ ಕೋರ್ಟ್‌ನಲ್ಲಿ ಆದಷ್ಟು ಬೇಗ ಮಾನನಷ್ಟ ದಾವೆ ಹೂಡಲಿ. ಕಾಂಗ್ರೆಸ್‌ನ ಮಾನ ಹರಾಜು ಹಾಕಲು ಬಿಜೆಪಿಗೆ ಮತ್ತೊಂದು ವೇದಿಕೆ ಲಭ್ಯವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರೊಬ್ಬರ ರಾಜೀನಾಮೆ ಪಡೆದು ಸರ್ಕಾರವೇ ಒಪ್ಪಿಕೊಂಡಿದೆ. ಇದು, ಅಲ್ಲದೆ ಅಭಿವೃದ್ಧಿ ಕೆಲಸಗಳಲ್ಲಿ ವಿಲವಾಗಿರುವುದು ಹೊರ ಬಿದ್ದಿದೆ.

ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಸಿಎಂ ಕುಟುಂಬವನ್ನು ಸುತ್ತಿಕೊಂಡು, ತನಿಖೆಯೂ ನಡೆದಿದೆ. ಸರ್ಕಾರ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವುಗಳಾಗಿವೆ. ಪೆಟ್ರೋಲ್, ಡೀಸೆಲ್, ಸಾರಿಗೆ, ಮೆಟ್ರೋ, ಅಬಕಾರಿ ಸೇರಿ ಅನೇಕ ಬೆಲೆಗಳನ್ನು ಹೆಚ್ಚಿರುವುದು ಸುಳ್ಳೆ ? ಎಂದು ಕೇಳಿದರು.

ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಬೆಲೆಗಳ ಏರಿಕೆ, ವೈಲ್ಯಗಳನ್ನು ಪಕ್ಷದ ಚಾರ್ಜ್‌ಶೀಟ್ ಒಳಗೊಂಡಿದೆ. ಕೋರ್ಟ್‌ನಲ್ಲಿ ಮಾನನಷ್ಟ ದಾವೆ ವಿಚಾರಣೆಗೆ ಬಂದಾಗ ಆಧಾರ, ಪುರಾವೆ ಸಹಿತ ಇದನ್ನು ಮಂಡಿಸುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net