ಅಂಗವಿಕಲರ ಅನುದಾನ ಕಡಿತವೇ ಕಾಂಗ್ರೆಸ್ ಅಕ್ಕರೆ: ಲಹರ್ ಸಿಂಗ್ ವ್ಯಂಗ್ಯ

Siroya and Rahul jodo Yatra
Published on

ಬೆಂಗಳೂರು: ಅಂಗವಿಕಲರ ವಿವಿಧ ಶ್ರೇಯೋಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಅಗಾಧ ಪ್ರಮಾಣದಲ್ಲಿ ಕಡಿತವೇ ಕಾಂಗ್ರೆಸ್ ಸರ್ಕಾರ ತೋರಿಸುತ್ತಿರುವ ಅಕ್ಕರೆಯಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶದ ಜತೆಗೆ ಭಾರತ್ ಜೋಡೊ ಯಾತ್ರೆಯಲ್ಲಿ ಗಾಲಿ ಕುರ್ಚಿ ಮೇಲೆ ಅಂಗವಿಕಲನನ್ನು ಕೂಡಿಸಿ ರಾಹುಲ್ ಗಾಂಧಿ ತಳ್ಳುತ್ತಿರುವ ೆಟೊ ಹಂಚಿಕೊಂಡಿದ್ದಾರೆ.

ಅಂಗವಿಕಲರ ಮೇಲೆ ಕಾಂಗ್ರೆಸ್ ಪಕ್ಷದ ಮಮತೆ, ಕಾಳಜಿ ಈ ೆಟೊಗೆ ಸೀಮಿತವಾಗಿದೆ. ಆದರೆ ಕಳೆದ ಬಜೆಟ್‌ನ 53 ಕೋಟಿ ರೂ.ಗಳಿಂದ ಈ ಬಾರಿ ಬಜೆಟ್‌ನಲ್ಲಿ 43 ಕೋಟಿ ರೂ.ಗೆ ಇಳಿಸಿದ್ದು, ಕಾಂಗ್ರೆಸ್‌ನ ನಿಜಬಣ್ಣ ಬಯಲುಗೊಳಿಸಿದೆ ಎಂದು ಟೀಕಿಸಿದರು.

ಏಕಾಏಕಿ ಅನುದಾವನ್ನು 10 ಕೋಟಿ ರೂ. ಕಡಿಮೆ ಮಾಡಿರುವ ಕಾರಣ ಅಂಗವಿಕಲರು, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಇಕ್ಕಟ್ಟಿಗೆ ಸಿಲುಕಿದೆ. ವಿವಿಧ 14 ಕಾರ್ಯಕ್ರಮಗಳಿಗೆ ಅನುದಾನ ಸಾಕಾಗುತ್ತಿಲ್ಲ.

ನೆರವು ಬಯಸಿದ ಸಾವಿರಾರು ಅರ್ಜಿಗಳ ಪೈಕಿ ಬೆರಳೆಣಿಕೆಯಷ್ಟು ಅಂಗವಿಕಲರಿಗೆ ನೆರವು ಸಿಗುತ್ತಿದೆ. ದುರ್ಬಲರು, ಅಂಗವಿಕಲರು, ಹಿರಿಯ ನಾಗರಿಕರ ಸಬಲೀಕರಣ ಬರೀ ಮಾತಿನಲ್ಲಿ ಸಾಧಿಸಲಾಗದು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಲಹರ್ ಸಿಂಗ್ ಸಿರೋಯ ಚುಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net