'ನಮ್ಮ ಇತರ ಗ್ಯಾರಂಟಿಗಳು, 40% ಕಮಿಷನ್ ಹಗರಣದ ತನಿಖೆ ಉಚಿತ'; ಬಿಜೆಪಿ ವಿರುದ್ಧ ಕಾಂಗ್ರೆಸ್ ಲೇವಡಿ

congress
congress slams bjp through tweet
Published on

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಬಿಜೆಪಿ ವಿರುದ್ಧ ಇದೀಗ ರಾಜ್ಯ ಕಾಂಗ್ರೆಸ್(State Congress) ಟ್ವೀಟ್ ಮುಖೇನ ಲೇವಡಿ ಮಾಡಿದೆ.

"1ನೇ ಗ್ಯಾರಂಟಿ - ವಿದ್ಯುತ್, ಮೀಟರ್ ದರ ಏರಿಕೆ, 2ನೇ ಗ್ಯಾರಂಟಿ - ಕುಡಿಯುವ ನೀರಿನ ಬೆಲೆ ಏರಿಕೆ, 3ನೇ ಗ್ಯಾರಂಟಿ - ಸದ್ದಿಲ್ಲದೆ ಕೆಎಸ್​ಆರ್​ಟಿಸಿ ಟಿಕೆಟ್ ದರ ಏರಿಕೆ, 4ನೇ ಗ್ಯಾರಂಟಿ - ಮದ್ಯಪಾನದ ಬೆಲೆಯೂ ಏರಿಕೆ, 5ನೇ ಗ್ಯಾರಂಟಿ - ನಂದಿನಿ ಹಾಲಿನ ದರವೂ ಏರಿಕೆ, 6ನೇ ಗ್ಯಾರಂಟಿ - ಆಸ್ತಿ ನೋಂದಣಿ ಶುಲ್ಕ ಏರಿಕೆ, 7ನೇ ಗ್ಯಾರಂಟಿ - ಮೊಟ್ಟೆ, ಮಾಂಸದ ದರವೂ ಏರಿಕೆ" ಎಂದು ಬಿಜೆಪಿ(BJP) ಟ್ವೀಟ್ ಮಾಡಿ ವ್ಯಂಗ್ಯವಾಡಿತ್ತು.

ಬಿಜೆಪಿ ಮಾಡಿದ ಈ ಟ್ವೀಟ್​ ಅನ್ನು ಉಲ್ಲೇಖಿಸಿರುವ ಕಾಂಗ್ರೆಸ್, "ಬಿಜೆಪಿಯವರೇ ನಮ್ಮ ಇತರ ಗ್ಯಾರಂಟಿಗಳು 40% ಕಮಿಷನ್ ಹಗರಣದ ತನಿಖೆ ಉಚಿತ, ನಿಮಗೆ ಶಿಕ್ಷೆ ಖಚಿತ, ಜನರಿಗೆ ನೆಮ್ಮದಿ ನಿಶ್ಚಿತ" ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net