VIDEO| 'ಹೀಗೆ ಕೇಳೋಕೆ ನಿಮ್ಮಲ್ಲಿ ಯಾರಿಗಾದ್ರೂ ಧೈರ್ಯ ಇದ್ಯಾ'? ಭವ್ಯ ನೇರ ಪ್ರಶ್ನೆ ಹೀಗಿದೆ….

ವಿಜಯವಾಣಿ-2024-01-20T184616.401
Published on

ಬೆಂಗಳೂರು: ರಾಜ್ಯ ರಾಜಕೀಯ ಅಖಾಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ವಿಜಯವಾಣಿ ನಡೆಸಿದ 'ಫೇಸ್​ 2 ಫೇಸ್'​ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಕಾಂಗ್ರೆಸ್​ ಯುವನಾಯಕಿ ಭವ್ಯ ನರಸಿಂಹಮೂರ್ತಿ, ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

ಒಟ್ಟಾರೆಯಾಗಿ ಈ ಐದು ಗ್ಯಾರಂಟಿಗಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೆಚ್ಚು ಸ್ಥಾನಗಳನ್ನು ತಂದುಕೊಡಲಿದೆ ಎಂಬ ವಿಶ್ವಾಸ ನಿಮಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭವ್ಯ, "ಖಂಡಿತ, ಯಾಕಂದ್ರೆ ಬಿಜೆಪಿಗೆ ಒಂದೇ ಒಂದು ಸ್ಟ್ರಾಟರ್ಜಿ ಇರೋದು. ಲೋಕಸಭೆ ಚುನಾವಣೆ ಆದನಂತರ ಈ ಗ್ಯಾರಂಟಿಗಳು ಇರುವುದಿಲ್ಲ ಎಂದು ಅವರು ಅಂದುಕೊಂಡಿದ್ದಾರೆ" ಎಂದರು.

"ಅದನ್ನು ಬಿಟ್ರೆ ಬೇರೆ ಯಾವುದೇ ಒಂದು ನಮ್ಮ ಸರ್ಕಾರದ ವಿರುದ್ಧ ಇಲ್ಲ. ಅದು ನಾವು ಇವತ್ತು ಅನುಷ್ಠಾನ ಮಾಡಿದ್ದೇವೆ ಅಂದಮೇಲೆ, ಐದು ವರ್ಷ ಮಾಡಲು ಆಗಲ್ವಾ? ಈ ವರ್ಷ ಮಾತ್ರ ಹಣವಿರುತ್ತೆ, ಮುಂದಿನ ವರ್ಷ ಇರಲ್ವಾ? ಎಲ್ಲದಕ್ಕಿಂತ ಮುಖ್ಯವಾಗಿ ನಾನು ಬಿಜೆಪಿ ನಾಯಕರನ್ನು ಕೇಳೋದು ನಮ್ಮ ರಾಜ್ಯ.........." ಮತ್ತಷ್ಟು ಸಂಗತಿಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net