ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಿದ್ದರಾಮಯ್ಯ ಆಪ್ತರ ಬೇಸರ; ಕಾಂಗ್ರೆಸ್​​ನಲ್ಲೂ ಅಸಮಾಧಾನದ ಹೊಗೆ

shivakumar
Published on

ಬೀದರ್: ಕೊವಿಡ್​-19ರ ಬಿಕ್ಕಟ್ಟಿನ ನಡುವೆ ರಾಜಕೀಯ ಪಕ್ಷಗಳಲ್ಲೂ ಅಸಮಾಧಾನ, ಭಿನ್ನಮತ ಶುರುವಾಗಿದೆ. ಕಾಂಗ್ರೆಸ್​ನಲ್ಲೂ ಅತೃಪ್ತಿಯ ಹೊಗೆಯಾಡುತ್ತಿದೆ ಎಂಬುದು ಇಂದು ಬೀದರ್​​ನಲ್ಲಿ ಬಹಿರಂಗವಾಗಿದೆ.

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೂ ಮೊದಲೇ ಅವರ ಬಗ್ಗೆ ಶಾಸಕ ಬಿ.ನಾರಾಯಣ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್​ ಕೈಯಿಗೆ ಸಿಗೋದೇ ಇಲ್ಲ ಎಂದು ಅವರು ದೂರಿದ್ದಾರೆ.
ಡಿ.ಕೆ.ಶಿವಕುಮಾರ್​ ಅವರ ಎದುರು ನಾವು ನಿಂತರೂ ಅವರು ನಮ್ಮನ್ನು ನೋಡುವುದಿಲ್ಲ. ನಮಸ್ಕಾರ ಮಾಡಿದರೂ ಮಾಡುವುದಿಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣ್​ ಅವರು ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಬೇಸರ ಹೊರಹಾಕಿದ್ದಾರೆ.

ಈ ಸಭೆಯಲ್ಲಿ ಮಾಜಿ ಸಚಿವರಾದ ರಾಜಶೇಖರ್​ ಪಾಟೀಲ್​, ರಹೀಂ ಖಾನ್​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಎದುರಲ್ಲೇ ಶಾಸಕ ಬಿ.ನಾರಾಯಣ್​ ಹೀಗೆ ಹೇಳಿದ್ದಾರೆ. ಬಿ.ನಾರಾಯಣ್​ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net