ಸ್ಪೀಕರ್ ಮೇಲೆ ಸಿಟ್ಟಾದ ಕಾಂಗ್ರೆಸ್ ಶಾಸಕ ಗಣೇಶ್|Angry with Speaker

Kampli MLA Ganesh
Published on

ಬೆಂಗಳೂರು: ಸ್ಪೀಕರ್ ಯು.ಟಿ.ಖಾದರ್ ಮೇಲೆ ಸದನದಲ್ಲಿಯೇ ಸಿಟ್ಟು ಮಾಡಿಕೊಂಡು ಕಾಂಗ್ರೆಸ್‌ನ ಜೆ.ಎನ್. ಗಣೇಶ್(Congress MLA Ganesh angry with Speaker) ಹೊರ ನಡೆದ ಪ್ರಸಂಗ ನಡೆಯಿತು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಕೃಷಿ ಸಚಿವರು ಉತ್ತರ ಕೊಟ್ಟ ಬಳಿಕ ಉಪಪ್ರಶ್ನೆ ಕೇಳಲು ಅವಕಾಶ ಮಾಡಿಕೊಡದೇ ಇದ್ದುದರಿಂದ ಸ್ಪೀಕರ್ ವಿರುದ್ಧ ಸಿಟ್ಟಾಗಿ ನೀವು ನಮಗೆ ಪ್ರಶ್ನೆ ಕೇಳಲು ಅವಕಾಶ ಕೊಡದೇ ಹೋದರೆ ನಾವೇಕೆ ಸದನಕ್ಕೆ ಬರಬೇಕು ಎಂದು ಸಿಡಿಮಿಡಿಗೊಂಡರು.

ಪ್ರಶ್ನೋತ್ತರ ಕಲಾಪ ಮುಗಿದು ಗಮನ ಸೆಳೆಯುವ ಸೂಚನೆ ಪ್ರಾರಂಭಿಸಿದಾಗಲೂ ಉಪಪ್ರಶ್ನೆ ಕೇಳು ಗಣೇಶ್ ಮುಂದಾದರು. ಒಂದು ಹಂತದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಉತ್ತರ ಕೊಡಲು ಎದ್ದು ನಿಂತರು. ಆದರೆ, ಪ್ರಶ್ನೋತ್ತರ ಕಲಾಪ ಮುಗಿದಿರುವುದರಿಂದ ಸ್ಪೀಕರ್ ಅವಕಾಶ ನಿರಾಕಿರಿಸಿರು. ಅದರಿಂದ ಸಿಟ್ಟಿಗೆದ್ದು ಕೈಯಲ್ಲಿ ೈಲ್ ಹಿಡಿದು ಗಣೇಶ್ ಹೊರ ನಡೆದರು. ಕೆಲವರು ಸಮಾಧಾನ ಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ನಾನು ಸಿಎಂಗೆ ದೂರು ನೀಡುತ್ತೇನೆ ಎಂದು ಹೇಳುತ್ತ ಗಣೇಶ್ ಆಕ್ರೋಶ ಭರಿತರಾಗಿ ಗೊಣಗುತ್ತ ಹೊರಕ್ಕೆ ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net