ಕಾಂಗ್ರೆಸ್‌ಗೆ ಲೋಕ ಸಮರದಲ್ಲಾಗಿದ್ದು ಸೋಲಲ್ಲ, ಪಕ್ಷದ ಗೆಲುವು 5 ವರ್ಷ ಮುಂದೂಡಲ್ಪಟ್ಟಿದೆಯಷ್ಟೇ: ಶಾಸಕ ಪ್ರದೀಪ್ ಈಶ್ವರ್

448097120_446463364839528_5658139222874752299_n
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾಗಿತ್ತು. ಆದರೆ, ನಮ್ಮದು ಸೋಲಲ್ಲ. ಪಕ್ಷದ ಗೆಲುವು 5 ವರ್ಷ ಮುಂದಕ್ಕೆ ಹೋಗಿದೆ ಅಷ್ಟೇ. ಇಲ್ಲಿ ಪಕ್ಷ ಸಂಘಟನೆ ಮುಖ್ಯವೇ ಹೊರತು ಯಾರೂ ದೊಡ್ಡವರಲ್ಲ. ಎಲ್ಲರೂ ಸೇರಿ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾನೇ ಸ್ಪರ್ಧಿಸಬೇಕಾಗಿತ್ತು. ಇದಾಗಿದ್ದಲ್ಲಿ ಗೇಮ್ ಬೇರೆ ರೀತಿಯೇ ಇರುತ್ತಿತ್ತು ಎಂತಲೂ ಹೇಳಿದ್ದಾರೆ.

ರಾಜಕಾರಣದಲ್ಲಿ ಸೋಲು ಗೆಲುವು ಇರುತ್ತದೆ. ಚುನಾವಣೆಯಲ್ಲಿ ನೂತನ ಸಂಸದ ಡಾ ಕೆ.ಸುಧಾಕರ್ ಪರವಾಗಿ ಜನಾಭಿಪ್ರಾಯ ಪರವಾಗಿ ಬಂದಿದೆ. ಅವರು ಒಳ್ಳೆಯ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಭಾರಿ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಮತ ಲೀಡ್ ಪಡೆಯುವುದಿಲ್ಲ ಎಂಬ ಪ್ರದೀಪ್ ಈಶ್ವರ್ ಭವಿಷ್ಯವು ಸುಳ್ಳಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net