ಪೊಲೀಸ್​ ಠಾಣೆ ಎದುರಲ್ಲೇ ಕಾಂಗ್ರೆಸ್ ಮುಖಂಡನ​ ಬರ್ಬರ ಹತ್ಯೆ! ಬೆಚ್ಚಿಬಿದ್ದ ಜನ

murder amjad
Published on

ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆ ಮುಂದೆ ಹಾಡಹಗಲೇ ಕಾಂಗ್ರೆಸ್​ ಮುಖಂಡನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ಮಧ್ಯಾಹ್ನ ಜಿಲ್ಲೆಯಲ್ಲಿ ಸಂಭವಿಸಿದೆ.

ರೌಡಿಶೀಟರ್ ಅಮ್ಜದ್(43) ಕೊಲೆಯಾದವ. ಬೈಕ್​ನಲ್ಲಿ ಬರುತ್ತಿದ್ದ ಅಮ್ಜದ್​ನನ್ನು ಒಮ್ನಿ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಅಪರಿಚಿತರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಮುಂಭಾಗ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಂದು ಪರಾರಿಯಾಗಿದ್ದಾರೆ. ಅಮ್ಜದ್​ ಈ ಹಿಂದೆ ಅತ್ಯಾಚಾರ ಪ್ರಕರಣವೊಂದರ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ. ಕೆಲ ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯದಲ್ಲಿ ಕಾಂಗ್ರೆಸ್ ಮುಖಂಡನಾಗಿ ಗುರುತಿಸಿಕೊಂಡಿದ್ದ. ಇದನ್ನೂ ಓದಿರಿ ನೂರಾರು ಕನಸಿನೊಂದಿಗೆ ದಾಪಂತ್ಯಕ್ಕೆ ಕಾಲಿಟ್ಟವಳ ಬದುಕಲ್ಲಿ ದುರಂತ, ತವರು ಮನೆಯಲ್ಲೇ ಯುವತಿ ಆತ್ಮಹತ್ಯೆ

ಕೊಲೆಗೆ ಕಾರಣ ತಿಳಿದುಬಂದಿಲ್ಲ. ಹಳೇ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್​ ಠಾಣೆ ಸಮೀಪದಲ್ಲೇ ನಡೆದ ಕೊಲೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಶಿಡ್ಲಘಟ್ಟ ನಗರ ಪೊಲೀಸರು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net