'ರೈತ ಹೋರಾಟಗಾರರು ಕುಡಿಯೋದಕ್ಕೆ ಎಣ್ಣೆ ಕೊಡೋಣ ಬನ್ನಿ!' ಕಾಂಗ್ರೆಸ್​ ನಾಯಕಿಯ ವಿಶೇಷ ಕರೆ

congress
Published on

ಚಂಡೀಗಢ: ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿ ಭಾಗಗಳಲ್ಲಿ ರೈತ ಹೋರಾಟ ಇನ್ನೂ ಮುಂದುವರಿದಿದೆ. ಅನೇಕರು ನೀರು, ಊಟ, ಹಾಸಿಗೆ ಹೀಗೆ ನಾನಾ ರೀತಿಯ ಸಹಾಯವನ್ನು ಹೋರಾಟಗಾರರಿಗೆ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್​ ನಾಯಕಿಯೊಬ್ಬರು ಹೋರಾಟಗಾರರಿಗೆ ಕುಡಿಯಲು ಮದ್ಯವನ್ನೂ ನೀಡುವುದಕ್ಕೆ ಮುಂದಾಗಿದ್ದಾರೆ.

ಹರಿಯಾಣದ ಕಾಂಗ್ರೆಸ್​ ಮುಖಂಡೆ ವಿದ್ಯಾ ರಾಣಿ ಈ ರೀತಿ ವಿಶೇಷ ಸಹಾಯಕ್ಕೆ ಮುಂದಾಗಿದ್ದಾರೆ. ಅವರ ಮಾತಿನ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ರೈತರಿಗಾಗಿ ನಾವು ಪಾದಯಾತ್ರೆ ಮಾಡೋಣ. ಅದು ನಮ್ಮ ಪಕ್ಷಕ್ಕೆ ಹೊಸ ಹುರುಪು ನೀಡಲಿದೆ. ಈ ಬಾರಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಅದರಿಂದ ನಮ್ಮ ಉತ್ಸಾಹ ಕಡಿಮೆಯಾಗಿದೆ. ಆದರೆ ಈಗ ಹೋರಾಟದಲ್ಲಿ ಪಾಲ್ಗೊಳ್ಳೋಣ. ರೈತರಿಗೆ ಏನು ಬೇಕೋ ಅದನ್ನು ಕೊಡೋಣ. ಅದು ತರಕಾರಿಯೇ ಆಗಿರಬಹುದು ಕುಡಿಯಲು ಮದ್ಯವೇ ಆಗಿರಬಹುದು. ಅದನ್ನು ಅವರಿಗೆ ಕೊಟ್ಟು ಬೆಂಬಲಿಸೋಣ ಎಂದು ವಿದ್ಯಾ ರಾಣಿ ಹೇಳಿದ್ದಾರೆ.

ನಮ್ಮ ಪ್ರತಿಯೊಬ್ಬ ಕಾರ್ಯಕರ್ತರೂ ರೈತರ ಬೆಂಬಲಕ್ಕೆ ನಿಲ್ಲೋಣ. ಅವರಿಗೆ ಎಷ್ಟು ತಿನ್ನುವುದಕ್ಕೆ, ಕುಡಿಯುವುದಕ್ಕೆ ಬೇಕೋ ಅಷ್ಟು ಕೊಡೋಣ. ಅವರಿಗೆ ಹಣ ನೀಡುವ ಸಾಮರ್ಥ್ಯ ನಮ್ಮಲ್ಲಿದ್ದೇ ಇದೆ ಎಂದು ಅವರು ಹೇಳಿದ್ದಾರೆ. ವಿದ್ಯಾ ಪಕ್ಕದಲ್ಲಿ ಅನೇಕರು ಕುಳಿತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net