ಸಂವಿಧಾನ ಉಳಿಸಲು ಮೋದಿಯನ್ನು ಮುಗಿಸಿ ಎಂದ ಕಾಂಗ್ರೆಸ್ ನಾಯಕ!

raja pateria
Published on

ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ, ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರ ಪ್ರಕಾರ ಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಜನ ಸಿದ್ಧರಾಗಬೇಕಂತೆ! ಇವು ಸಾರ್ವಜನಿಕವಾಗಿ ಸಂವಿಧಾನ ರಕ್ಷಿಸಲು ಪ್ರಧಾನಿ ಮೋದಿಯನ್ನು ಹತ್ಯೆ ಮಾಡಿ ಎಂದು ಹೇಳಿದ್ದಾರೆ.

ಇದೀಗ ಕಾಂಗ್ರೆಸ್ ನಾಯಕ ಪಟೇರಿಯಾ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು 'ಪ್ರಧಾನಿ ಮೋದಿ ಸಮಾಜವನ್ನು ವಿಭಾಗ ಮಾಡುತ್ತಿದ್ದಾರೆ ಎಂದು ಅವರು ವೀಡಿಯೊದಲ್ಲಿ ಆರೋಪಿಸಿದ್ದು ಇದನ್ನು ತಡೆಯಲು ಮತ್ತು ಸಂವಿಧಾನವನ್ನು ರಕ್ಷಿಸಲು ಪ್ರಧಾನಿಯನ್ನು ಕೊಲ್ಲಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ವಿಚಿತ್ರ ಎಂದರೆ ಈ ಹೇಳಿಕೆಗೆ ಸುತ್ತ ಇದ್ದ ಪಟೇರಿಯಾ ಹಿಂಬಾಲಕರು ಚಪ್ಪಾಳೆ ತಟ್ಟಿ ಸಮರ್ಥಿಸಿದ್ದಾರೆ.

ಈ ವಿಡಿಯೋ ಬಹಿರಂಗವಾದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ರಾಜು ಪಟೇರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ನರೋತ್ತಮ್​ ಮಿಶ್ರಾ ‘ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ್ದರು. ಸೋನಿಯಾ ಗಾಂಧಿ ಅವರನ್ನು 'ಮೌತ್ ಕಾ ಸೌದಾಗರ್' ಎಂದು ಕರೆದರು' ಎಂದು ಕಾಂಗ್ರೆಸ್​ ನಾಯಕರ ಹಿಂದಿನ ಹೇಳಿಕೆಗಳನ್ನು ನೆನೆಸಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net