ಆಟೋ ಚಾಲಕರ ಸಮಸ್ಯೆಗಳ ಬಗ್ಗೆ ಚೆಲುವರಾಯಸ್ವಾಮಿ ಮಾತಾಡಿದ್ದೇನು?

cheluvaraya
Published on

ಬೆಂಗಳೂರು: 'ನಮ್ಮ ಸರ್ಕಾರ ಬಂದ ಬಳಿಕ ಚಾಲಕರ ರಕ್ಷಣೆ ಮಾಡುತ್ತದೆ. ನೊಂದ ಚಾಲಕರ ಪರವಾಗಿ ಕಾಂಗ್ರೆಸ್ ನಿಂತಿದೆ' ಎಂದು ಕಾಂಗ್ರೆಸ್​ ಶಾಸಕ ಚೆಲುವರಾಯಸ್ವಾಮಿ ಹೇಳಿದರು.

ಇತ್ತೀಚೆಗೆ ರಾಜ್ಯ ಸರ್ಕಾರ ಓಲಾ-ಊಬರ್​ನ ಆಟೋ ರಿಕ್ಷಾಗಳನ್ನು ನಿಷೇಧಿಸಿತ್ತು. ತಂತ್ರಜ್ಞಾನ ಬಳಸಿಕೊಂಡು ಸೇವೆ ನೀಡುವ ಈ ಆ್ಯಪ್​ಗಳು ಹೆಚ್ಚಿನ ದರ ನಿಗದಿಪಡಿಸಿದ್ದರಿಂದ ನಿಷೇಧಕ್ಕೆ ಒಳಗಾಗಿದ್ದವು.

ಈ ಘಟನೆಯಲ್ಲಿ ಅನೇಕ ರಿಕ್ಷಾ ಚಾಲಕ ಒಬ್ಬರಿಗೆ ಪೊಲೀಸರು ರೂ.6000/- ದಂಡ ಹಾಕಿದ್ದರು. ಕೆಲಸ ಕಳೆದುಕೊಂಡಿದ್ದರು. ಇದರ ಬಗ್ಗೆ ಮಾತನಾಡುತ್ತಾ 'ಸರ್ಕಾರ ಚಾಲಕರಿಗೆ ಕಿರುಕುಳ ನಿಲ್ಲಿಸಬೇಕು' ಎಂದು ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net