ಕಾಂಗ್ರೆಸ್​ನಿಂದ ಸಂವಿಧಾನದ ಕಗ್ಗೋಲೆಗೆ ಯತ್ನ

klr emergency
ಕೋಲಾರ ನಗರದ ಸುವರ್ಣ ಕನ್ನಡ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಪ್ರಚಾರ ಕಾರ್ಯಕ್ರಮವನ್ನು ಮಾಜಿ ಸಚಿವ ಎನ್​.ಮಹೇಶ್​ ಉದ್ಘಾಟಿಸಿದರು. ಡಾ.ಕೆ.ಎನ್​.ವೇಣುಗೋಪಾಲ್​, ಕೇಶವ ಪ್ರಸಾದ್​, ವೆಂಕಟಸ್ವಾಮಿ, ವೈ.ಸಂಪಂಗಿ, ಬಿ.ವಿ.ಮಹೇಶ್​, ಎಂ.ಪಿ.ನಾರಾಯಣಸ್ವಾಮಿ ಇದ್ದರು.
Published on

ಕೋಲಾರ: ಸಂವಿಧಾನವನ್ನು ಆಡಳಿತದ ಗ್ರಂಥ ಎಂದು ಮೋದಿ ಅವರು ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ಸಂವಿಧಾನವು ಕಗ್ಗೋಲೆ ಮಾಡಲು ಮುಂದಾಗಿದ್ದು ಕಾಂಗ್ರೆಸ್​ ಎಂದು ಮಾಜಿ ಸಚಿವ ಎನ್​.ಮಹೇಶ್​ ಆರೋಪಿಸಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್​ ಪಕ್ಷವು ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ವಿರುದ್ಧ ಹೇಳಿಕೆ ನೀಡಿಕೊಂಡ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿತು ಎಂದರು.
ಬಿಜೆಪಿ ಅಧಿಕಾರಿಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಅಂತ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ರಾಹುಲ್​ ಗಾಂಧಿ ಐಎನ್​ಡಿ ಒಕ್ಕೂಟದ ಮುಖಂಡರ ಜಪ ಆಗಿತ್ತು. ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಅಂತ ಮನವಿ ಮಾಡಿದರು, ಅದರೂ ಸಹ ಪ್ರಭುದ್ಧರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದರು.
ಆಡಳಿತ ಧರ್ಮಗ್ರಂಥ ಸಂವಿಧಾನ ಅಂತ ಮೋದಿ ಹೇಳಿದ್ದಾರೆ, ಇದನ್ನು ಜನ ನಂಬಲಿಲ್ಲ, ಆದರೆ ರಾಹುಲ್​ ಗಾಂಧಿ ಹೇಳಿದ್ನ ಬೇಗ ನಂಬಿದರು. ಡಾ.ಬಿ.ಆರ್​.ಅಂಬೇಡ್ಕರ್​ ಅವರು ಬಂದು ಬದಲಾಯಿಸಲಾಗುವುದಿಲ್ಲ ಅಂತ ಹೇಳಿದ್ದರು, ಇದನ್ನು ಜನ ಸರಿಯಾದ ರೀತಿ ಗ್ರಹಿಸಿಕೊಳ್ಳಲಾಗಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಸಂವಿಧಾನ ಬದಲಾವಣೆ ಮಾಡಲು ಅದೇನು ಮಗ್ಗಿ ಪುಸ್ತಕವಲ್ಲ, ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ, ಸದನದ ಮೊದಲೇ ದಿನವೇ ಸೋನಿಯಾ, ರಾಹುಲ್​ ಗಾಂಧಿ, ಇಂಡಿಯಾ ಒಕ್ಕೂಟದ ಸಂಸದರು ಗಲಾಟೆ ಶುರು ಮಾಡಿದ್ದಾರೆ. ಅವರಿಗೆಲ್ಲ ತುರ್ತು ಪರಿಸ್ಥಿತಿಯ ಬಗ್ಗೆ ಅರಿವಿಲ್ಲದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.
ದೇಶದಲ್ಲಿ ಯುಪಿಎ ಸರ್ಕಾರದ ಅಧಿಕಾರದಲ್ಲಿ ಇದ್ದಾಗ ಸಂವಿಧಾನ ಪುಸ್ತಕವನ್ನು ಮುಟ್ಟೆಯಿಲ್ಲ, ಆದರೆ ಈಗ ಬಿಡದೀರ ಹಿಡುದುಕೊಂಡಿದ್ದಾರೆ. ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಮನಮೋಹನ್​ ಸಿಂಗ್​ ಸೇರಿದಂತೆ ಹಲವು ಅಧಿಕಾರ ನಡೆಸಿದರು. ಸಂವಿಧಾನದ ಜಪ ಮಾಡುತ್ತಿದ್ದರು ಹೊರತು ಉದ್ದೇಶ ಈಡೇರಿಸಲು ಮುಂದಾಗಲಿಲ್ಲ, ಅಂಬೇಡ್ಕರ್​ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ್ದು ಕಾಂಗ್ರೆಸ್​ ಎಂದು ಕಿಡಿಕಾರಿದರು.
ತುರ್ತು ಪರಿಸಿಸ್ಥಿತಿ ವಿರುದ್ಧ ಹೋರಾಟ ಮಾಡಿದ 1,70,000 ಮಂದಿಯನ್ನು ಬಂಧಿಸಿದರು. ಇದರ ನೋವು ರಾಜ್ಯದ ಜನತೆಯು ಅನುಭವಿಸಿದ್ದಾರೆ, ಕಾಂಗ್ರೆಸ್​ನ ಜನ ವಿರೋಧಿ ಚಟುವಟಿಕೆಗಳ ಬಗ್ಗೆ ಹೇಳಲು ಸಾಕಷ್ಟು ಇವೆ ಎಂದರು.
ವಿಧಾನ ಪರಿಷತ್​ ಸದಸ್ಯ ಕೇಶವ ಪ್ರಸಾದ್​ ಮಾತನಾಡಿ, 1975 ಜೂನ್​ 25ರಂದು ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು, ಆಗ ದೇಶದಲ್ಲಿ ಅಗೋರ ಪರಿಸ್ಥಿತಿ ಉಂಟಾಗಿತ್ತು ಎಂದರು.
ಸಾವಿರಾರು ವರ್ಷಗಳಿಂದ ಬ್ರಿಟಿಷ್​, ಪ್ರೇಂಚ್​ ಸೇರಿದಂತೆ ಅನೇಕರನ್ನು ಎದುರಿಸಿತು ದೇಶ,
ಇಂದಿರಾಗಾಂಧಿ ಅವರು ಮಾಡಿದ ತಪು$್ಪಗಳಿಂದ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಸಂವಿಧಾನವನ್ನು ಕಗ್ಗೋಲೆ ಮಾಡೊದಂತಹ ದಿನ. ಇಂತಹ ಪರಿಸ್ಥಿತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆ ಜಾರಿಗೆ ಬರುವುದು ಕಷ್ಟ ಎಂದು ಜನರಲ್ಲಿ ಆತಂಕ ಕಾಡುತ್ತಿತ್ತು ಎಂದು ಹೇಳಿದರು.
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು ಬಯಲಿಗೆ ಬಂದಿತು, ಆಗ ಅಡ್ವಾನಿ ಅವರು ಪತ್ರಿಕಾ ಹೇಳಿಕೆ ನೀಡಲು ಮುಂದಾದಾಗ ಪೊಲೀಸರಿಂದ ಬಂಧನ ಮಾಡಿಸುತ್ತಾರೆ, ಮತದಾನದ ಹಣತಿಯನ್ನು ಜನಪ್ರತಿಧಿ ಪಾಲಿಸಬೇಕು, ಇಂದಿಗಾಂಧಿಯವರ ತೀಮಾರ್ನ ಸರಿಯಲ್ಲ ಅಂತ ಕೋರ್ಟ್​ ತೀರ್ಪು ನೀಡಿ, ಅವರ ಗೆಲುವನ್ನು ಅನೂರ್ಜಿತ ಅಂತ ಹೇಳಿತು, 6 ವರ್ಷ ಚುನಾವಣೆಯಲ್ಲಿ ನಿಲ್ಲಲು ಅರ್ಹರಲ್ಲ ಎಂದು ತೀರ್ಪು ನೀಡಿದ್ದು ಸರ್ವಾಧಿಕಾರಕ್ಕೆ ಸಾಯಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಆರ್​ಪಿಐ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net