ಮಿನಿಮತ ಸಮರಕ್ಕೆ ಕಾಂಗ್ರೆಸ್ ತಾಲೀಮು

Congress
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಸಾರ್ವತ್ರಿಕ ಚುನಾವಣೆ ದಿಗ್ವಿಜಯ ಈ ಉಪ ಚುನಾವಣೆಯಲ್ಲೂ ಮುಂದುವರಿಯಬೇಕು, ತಮಗೆ ಕೊಟ್ಟ ಜವಾಬ್ದಾರಿಯನ್ನು ಮೈಮರೆಯದೇ ನಿಭಾಯಿಸಿ, ಗ್ಯಾರಂಟಿಯೇ ನಮ್ಮ ಅಸವಾಗಿರಲಿ ಎಂದು ಸಚಿವರು, ಶಾಸಕರು, ಪರಿಷತ್ ಸದಸ್ಯರು, ಮುಖಂಡರಿಗೆ ಕಾಂಗ್ರೆಸ್ ಸ್ಪಷ್ಟ ಸೂಚನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಗೃಹ ಕಚೇರಿಯಿಂದ ಆಯೋಜಿಸಿದ್ದ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳ ವಿಡಿಯೋ ಸಂವಾದದಲ್ಲಿ ದೆಹಲಿಯಿಂದ ಪಾಲ್ಗೊಂಡಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಪಕ್ಷದ ನಿರ್ದೇಶನವನ್ನು ಸ್ಪಷ್ಟಪಡಿಸಿದರು.

ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಬೇಕು. ಯಾವುದೇ ಹಂತದಲ್ಲೂ ಹೋರಾಟ ಬಿಡಬಾರದು. ಪ್ರತಿಪಕ್ಷ ಮಾಡುವ ಆರೋಪಗಳಿಗೆ ಸರಿಯಾಗಿ ತಿರುಗೇಟು ನೀಡಬೇಕು. ಚುನಾವಣೆಗೆ ಉಳಿದಿರುವ ಕಾಲಾವಧಿಯಲ್ಲಿ ಮೈಮರೆಯದೇ ಎಲ್ಲರೂ ತೊಡಗಿಕೊಳ್ಳಬೇಕು. ಪಕ್ಷ ಎಲ್ಲವನ್ನೂ ಗಮನಿಸುತ್ತಿರುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net