

ನವದೆಹಲಿ: ವಯನಾಡು ಮತ್ತು ರಾಯ್ ಬರೇಲಿ 2024ರ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರರಿ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣಾ ವೆಚ್ಚಕ್ಕಾಗಿ 70 ಲಕ್ಷದಂತೆ ನೀಡಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಚುನಾವಣೆ ವೆಚ್ಚಕ್ಕೆ ಸಂಬಂಧಿಸಿ ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯನ್ನು ಈ ವಿವರ ನೀಡಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಕ್ರಮಾದಿತ್ಯ ಸಿಂಗ್ ಅವರಿಗೆ ಪಕ್ಷದ ನಿಧಿಯಿಂದ 87 ಲಕ್ಷ ರೂ. ನೀಡಲಾಗಿತ್ತು ತಿಳಿಸಲಾಗಿದೆ. ವಿಕ್ರಮಾದಿತ್ಯ ಸಿಂಗ್ ಅವರು ಬಿಜೆಪಿಯ ನಟಿ ಕಂಗನಾ ರನೌತ್ ವಿರುದ್ಧ ಪರಾಭವಗೊಂಡರು.
ಕೆಸಿ ವೇಣುಗೋಪಾಲ್, ಮಾಣಿಕಂ ಟ್ಯಾಗೋರ್, ಕಿಶೋರಿ ಲಾಲ್ ಶರ್ಮಾ ಅವರಿಗೆ ತಲಾ 70 ಲಕ್ಷ ರೂ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಆನಂದ್ ಶರ್ಮಾ ಮತ್ತು ದಿಗ್ವಿಜಯ್ ಸಿಂಗ್ ಅವರಿಗೆ ಕ್ರಮವಾಗಿ 46 ಲಕ್ಷ ಮತ್ತು 50 ಲಕ್ಷ ರೂ. ನೀಡಲಾಗಿತ್ತು.
ಕರ್ನಾಟಕದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಧಾಕೃಷ್ಣ ಮತ್ತು ಪಂಜಾಬ್‌ನ ಆನಂದಪುರ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಜಯ್ ಇಂದರ್ ಸಿಂಗ್ಲಾ ಅವರಿಗೂ ತಲಾ 70 ಲಕ್ಷ ರೂ. ನೀಡಲಾಗಿತ್ತು ಎಂದು ಆಯೋಗಕ್ಕೆ ಕಾಂಗ್ರೆಸ್ ಮಾಹಿತಿ ನೀಡಿದೆ.