

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಪಕ್ಷದ ಚಟುವಟಿಕೆ ಕುರಿತು ವಿವರಣೆ ನೀಡಿದ್ದಾರೆ.
ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಸದಸ್ಯತ್ವ ಅಭಿಯಾನ, ಪಕ್ಷ ಸಂಘಟನೆ ಸೇರಿ ವಿವಿಧ ವಿಚಾರಗಳ ಬಗ್ಗೆ ವೇಣುಗೋಪಾಲ್ ಮಾಹಿತಿ ಪಡೆದುಕೊಂಡಿದ್ದಾರೆ.
ಮಾರ್ಚ್ ಅಂತ್ಯದೊಳಗೆ ಪಕ್ಷದ ಸದಸ್ಯತ್ವ ಅಭಿಯಾನ ಮುಗಿಯಬೇಕಿದ್ದು, ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವದ ಗುರಿ ಹಾಕಿಕೊಂಡಿದ್ದು, ವ್ಯವಸ್ಥಿತ ಅಭಿಯಾನಕ್ಕೆ ಮಾಡಿರುವ ಯೋಜನೆ ಬಗ್ಗೆ ಸಲೀಂ ವಿವರಿಸಿದ್ದಾರೆ. ಜತೆಗೆ ಮೇಕೆದಾಟು ಪಾದಯಾತ್ರೆಯ ಬೆಳವಣಿಗೆಗಳು, ಅದನ್ನು ಮುಂದುವರಿಸುವುದು ಮತ್ತು ಮಹದಾಯಿ ವಿಚಾರದಲ್ಲಿ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಈ ವೇಳೆ ವಿಚಾರ ವಿನಿಮಯ ನಡೆದಿದೆ.