

ಬೆಂಗಳೂರು: ಹೊಸ ರಾಜಕೀಯ ಸಮ್ಮಿಶ್ರಣವೊಂದು ತಯಾರಾಗುತ್ತಿದೆ. ಈಗ ನಮಗಿರುವ ಪ್ರಶ್ನೆ, ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಕಾಣುತ್ತಿದೆ, ಥೇಟ್ ನಾಗವಲ್ಲಿಯ ತರ ಎಂದು ವ್ಯಂಗ್ಯವಾಡಿದೆ
ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯು ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ. ಒಬ್ಬರಿಗೆ ನಡೆಯಲಾಗದು, ಮತ್ತೊಬ್ಬರಿಗೆ ಕಣ್ಣು ಕಾಣದು. ಒಟ್ಟಿನಲ್ಲಿ ಈ ಸವಾರಿಯು ದಾರಿ ತಪ್ಪಿ ಪ್ರಪಾತಕ್ಕೆ ಬೀಳುವುದು ನಿಶ್ಚಿತ ಎಂದು ಲೇವಡಿ ಮಾಡಿದೆ.
ನಾಯಕತ್ವವಿಲ್ಲದ ಬಿಜೆಪಿ ಜೆಡಿಎಸ್‌ನಿಂದ ನಾಯಕತ್ವದ ಎರವಲು ಪಡೆಯಲು ಮುಂದಾಗಿದ್ದು ನಾಚಿಕೆಗೇಡು. ಇತ್ತ ಜೆಡಿಎಸ್ ಕೋಮುವಾದಿಗಳ ಸಂಗ ಮಾಡಿದ್ದು ಮತಿಗೇಡಿತನ ಎಂದು ಕುಟುಕಿದೆ.