ಬಿಜೆಪಿ ಹಾಗೂ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ರಾಜ್ಯ ಕಾಂಗ್ರೆಸ್

bjp
tweet war
Published on

ಬೆಂಗಳೂರು: "ಕಾಂಗ್ರೆಸ್(Congress) ಸರಕಾರಕ್ಕೆ ಯಾವುದೇ ಮಾನವೀಯತೆ ಉಳಿದ ಹಾಗಿಲ್ಲ! ಒಂದು ಕಡೆ ಕೊಟ್ಟ ಹಾಗೆ ಮಾಡುವುದು, ಮತ್ತೊಂದು ಕಡೆ ಅದನ್ನು ಕಸಿದುಕೊಳ್ಳುವುದು ಕಾಂಗ್ರೆಸ್‌ನ ಹಳೆ ಚಾಳಿ" ಎಂದು ಬಿಜೆಪಿ ಟ್ವೀಟ್​ನಲ್ಲಿ(Tweet) ಆರೋಪಿಸಿತ್ತು.

"ಇದೀಗ ಹಾಲಿಗೆ ನೀಡುವ ಪ್ರೋತ್ಸಾಹಧನವನ್ನು ಕಡಿತಗೊಳಿಸಿ, ಹೈನುಗಾರರ ಮೇಲೆ ಬರೆ ಎಳೆದಿದೆ ಕಾಂಗ್ರೆಸ್ ಸರಕಾರ! ಈ ರೈತವಿರೋಧಿ ಆದೇಶವನ್ನು ಹಿಂಪಡೆದು ರೈತರ ಹಕ್ಕನ್ನು ಮರಳಿಸುವಂತೆ ನಾವು ಆಗ್ರಹಿಸುತ್ತೇವೆ" ಎಂದು ಟ್ವೀಟ್​ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿತ್ತು.

ಸದ್ಯ ಬಿಜೆಪಿ(BJP) ಮಾಡಿರುವ ಆರೋಪಕ್ಕೆ ಟ್ವೀಟ್​ ಮೂಲಕವೇ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, "ಬಿಜೆಪಿ ಹಾಗೂ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮನ್ಮೂಲ್ ಹಾಲು ಒಕ್ಕೂಟವು ಬೇಸಿಗೆಯ ಮೇವು ಕೊರತೆಯ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಹೆಚ್ಚುವರಿ ಪ್ರೋತ್ಸಾಹಧನ ನೀಡಿತ್ತು, ಮಳೆಗಾಲ ಶುರುವಾದ ಕಾರಣ ಅದನ್ನು ಹಿಂಪಡೆದಿದೆ. ಈ ಪ್ರೋತ್ಸಾಹಧನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಇದು ಒಕ್ಕೂಟದ ನಿರ್ಧಾರ" ಎಂದು ತಿಳಿಸಿದೆ.

"ಬಿಜೆಪಿ ಇಂತಹ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುವ ಬದಲು 7 ತಿಂಗಳಿಂದ ಸರ್ಕಾರದ ಪ್ರೋತ್ಸಾಹಧನ ನೀಡದಿರುವುದೇಕೆ ಹೇಳಲಿ" ಎಂದು ಬಿಜೆಪಿಗೆ ಪ್ರಶ್ನೆಯೊಂದನ್ನು ನೀಡುವ ಮುಖೇನ ಕಾಂಗ್ರೆಸ್ ತಿರುಗೇಟು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net