ದಲಿತರ ಒಗ್ಗಟ್ಟು ಮುರಿದ ಕಾಂಗ್ರೆಸ್

samruddi,webp
ಕೋಲಾರದಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್‌ ಮಾತನಾಡಿದರು.
Published on

ಕೋಲಾರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಲಗೈ ಸಮುದಾಯವನ್ನು ಕಾಂಗ್ರೆಸ್ ಮೊದಲಿನಿಂದಲೂ ವಂಚಿಸಿಕೊಂಡು ಬಂದಿದೆ. ಆ ಮೂಲಕ ದಲಿತರಲ್ಲಿನ ಒಗ್ಗಟ್ಟನ್ನು ವಿಂಗಡಿಸಿ ದ್ವೇಷ ಬೀಜ ಬಿತ್ತಲು ಮುಂದಾಗಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಕೆ.ಎಚ್.ಮುನಿಯಪ್ಪ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ತಪ್ಪಿಸಲು ಜಿಲ್ಲೆಯ ಶಾಸಕರು ಆಡಿದ ನಾಟಕ ಹಾಸ್ಯಾಸ್ಪದವಾಗಿದೆ. ಸಿ.ಎಂ.ಮುನಿಯಪ್ಪ ಅವರನ್ನು ಮುಂದಿಟ್ಟುಕೊಂಡು ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ. ಜತೆಗೆ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಎರಡೂ ಬಣಗಳನ್ನು ತಪ್ಪಿಸಿ ಆಂಧ್ರದ ಮದನಪಲ್ಲಿ ನಿವಾಸಿ ಗೌತಮ್ ಅವರನ್ನು ತಂದು ನಿಲ್ಲಿಸಿದ್ದಾರೆ ಎಂದು ಹೇಳಿದರು.
ಬಲಗೈ ಸಮುದಾಯವನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಮುದಾಯಕ್ಕೂ ಸ್ವಾಭಿಮಾನವಿದೆ. ಕಾಂಗ್ರೆಸ್ ಮಾಡಿರುವ ಅನ್ಯಾಯಕ್ಕೆ ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು. ಕಣ್ಣಿಲ್ಲದ ಕಾಂಗ್ರೆಸ್ ಬಲಗೈ ಸಮುದಾಯ ಬಗ್ಗೆ ಮಾತನಾಡುತ್ತಿದೆ. ಸುಮಾರು ಮಂದಿ ಸಮಾಜದವರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬುದ್ಧರು ಇದ್ದಾರೆ. ಯೋಚನೆ ಮಾಡಿ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ವರಿಷ್ಠರು ಒತ್ತಾಯ ಮಾಡಿದ್ದರು, ಮುಳಬಾಗಿಲು ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕ ಇತ್ತು. ಮಲ್ಲೇಶ್ ಬಾಬು ಅವರಿಗೆ ಟಿಕೆಟ್ ನೀಡಲು ಒತ್ತಾಯ ಮಾಡಿ ಕಣಕ್ಕೆ ಇಳಿಸಲಾಗಿದೆ. ಎಲ್ಲ ಸಮುದಾಯಗಳವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಂದಿರುವುದು ಜೆಡಿಎಸ್ ಮತ್ತು ಬಿಜೆಪಿ ಮಾತ್ರ. ಅದಕ್ಕಾಗಿ ಕಾಂಗ್ರೆಸನ್ನು ತಿರಸ್ಕರಿಸಲು ಜನರೇ ತೀರ್ಮಾನಿಸಿದ್ದಾರೆ ಎಂದರು.
ಮಾಜಿ ಶಾಸಕರಾದ ಬಿ.ಪಿ.ಮುನಿವೆಂಕಟಪ್ಪ, ವೈ.ಸಂಪAಗಿ, ಮುಖಂಡರಾದ ಸುಂದರ್, ಮಂಜುನಾಥ್, ವಿ.ಕೆ.ರಾಜೇಶ್, ವಿ.ಕೆ.ರಾಜೇಶ್, ನಾರಾಯಣಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net