12 ಚಿನ್ನದ ಪದಕ ಪಡೆದ ಸಂಯಮಾಗೆ ಅಭಿನಂದನೆ

16blrp1
ಸಸ್ಯಶಾಸ್ತ್ರ ವಿಭಾಗದ ಪದವಿ ಪರೀಕ್ಷೆಯಲ್ಲಿ 12 ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ಜಿ.ಆರ್.ಸಂಯಮಾ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಅಭಿನಂದಿಸಲಾಯಿತು. ಹೇಮಾ, ಜಯಶೀಲಾ ಜಯಶಂಕರ್, ಪ್ರೇಮಲೀಲಾ, ಸೌಭಾಗ್ಯಾ ಇತರರು ಇದ್ದರು.
Published on

ಬೇಲೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಸ್ಯಶಾಸ್ತ್ರ ವಿಭಾಗದ ಪದವಿ ಪರೀಕ್ಷೆಯಲ್ಲಿ 12 ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ತಾಲೂಕಿನ ಜಿ.ಆರ್.ಸಂಯಮಾ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಶನಿವಾರ ಅಭಿನಂದಿಸಲಾಯಿತು.


ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಮಾಸಿಕ ಸಭೆಯಲ್ಲಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ್ ಮಾತನಾಡಿ, ಮಾನಸ ಗಂಗೋತ್ರಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಪದವಿ ಪರೀಕ್ಷೆಯಲ್ಲಿ ನಮ್ಮ ತಾಲೂಕಿನವರೇ ಆದ ಸಂಯಮ ಅವರು ಕಿರಿಯ ವಯಸ್ಸಿನಲ್ಲೆ 12 ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದು ಉತ್ತಮ ಸಾಧನೆ ಮಾಡುವ ಮೂಲಕ ನಮ್ಮ ತಾಲೂಕಿಗೆ ಹೆಮ್ಮೆ ತಂದಿರುವುದು ಶ್ಲಾಘನೀಯವಾಗಿದ್ದು ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸಿದರು.


ಪ್ರತಿಭೆಗಳು ಹಾಗೂ ಸಾಧಕಿಯರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಇನ್ನಷ್ಟು ಎತ್ತರಕ್ಕೆ ಬೆಳೆದು ಇನ್ನು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತಿದ್ದಾರೆ. ಅಡುಗೆ ಮನೆಯಿಂದ ಅಂತಾರಿಕ್ಷದವರೆಗೆ ಮಹಿಳೆಯರ ಸಾಧನೆ ಸಾಕಷ್ಟಿದೆ. ಬಾಹ್ಯಕಾಶದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ತಾಲೂಕು ಕಾರ್ಯದರ್ಶಿ ಹೇಮಾ, ರಾಜ್ಯ ಮಹಿಳಾ ಘಟಕದ ಸದಸ್ಯೆ ಜಯಶೀಲಾ ಜಯಶಂಕರ್, ನಿರ್ದೇಶಕರಾದ ಪ್ರೇಮಲೀಲಾ, ಸೌಭಾಗ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net