ದೇಶದ್ರೋಹಿಗಳಿಗೂ ಕಾಂಗ್ರೆಸ್ ಗ್ಯಾರಂಟಿ ; ವಿಜಯೇಂದ್ರ ಶಂಕೆ

Minister, CM, MLA, Oath,
Published on

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಒಂದೇ ದಿನ ಎಂಟು ಕೊಲೆ ಪ್ರಕರಣಗಳಾಗಿವೆ. ದುಷ್ಕೃತ್ಯ ಹಗುರವಾಗಿ ತೆಗೆದುಕೊಳ್ಳುವ ವಿಚಾರವಲ್ಲ. ಗ್ಯಾರಂಟಿಗಳ ಭರಾಟೆಯಲ್ಲಿ ದೇಶದ್ರೋಹಿಗಳು, ದರೋಡೆಕೋರರು, ಬರ್ಬರ ಹತ್ಯೆ ಮಾಡುವವರಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಡುವಂತೆ ಕಾಣುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶಂಕಿಸಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಯುವತಿಯ ಬರ್ಬರ ಹತ್ಯೆಗೆ ವೈಯಕ್ತಿಕ ವಿಚಾರ ಕಾರಣವೆಂದು ಸಿಎಂ, ಗೃಹ ಸಚಿವರು ತೇಲಿಬಿಡುವ ಕೆಲಸ ಮಾಡುತ್ತಿದ್ದಾರೆ. ತುಷ್ಟೀಕರಣ ರಾಜಕಾರಣವು ದೇಶದ್ರೋಹಿಗಳಿಗೆ ರಕ್ಷಣೆ ಕೊಡುವಂತಿದೆ ಎಂದು ಆಕ್ಷೇಪಿಸಿದರು.

ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹಾಯಿಸಿದ್ದು, ಒಬ್ಬರ ಹತ್ಯೆಯಾಗಿದ್ದರೆ ಗದಗ, ಧಾರವಾಡ ಘಟನೆಗಳು ಉದಾರಣೆಯಾಗಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೇಶ ವಿದ್ರೋಹಿ ೋಷಣೆ ಕೂಗಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಹಲವೆಡೆ ಪಾಕಿಸ್ತಾನ ಪರ ೋಷಣೆ ಕೂಗುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದು ಇದಕ್ಕೆ ಕಾರಣ. ಕಾನೂನು ಸುವ್ಯವಸ್ಥೆ ಹದಗೆಟ್ಟು ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ.

ದೇಶದ್ರೋಹಿಗಳಿಗೆ ದೊಡ್ಡ ಶಕ್ತಿ ಕೊಟ್ಟಂತಾಗಿದೆ. ಕಾಂಗ್ರೆಸ್ ಸರ್ಕಾರದ ನೀತಿಗಳು ರಾಜ್ಯಕ್ಕೆ ಮಾರಕವಾಗಿದೆ. ಸುರಕ್ಷತೆ, ಶಾಂತಿಗೆ ಭಂಗ ತರುವವರಿಗೆ ಸಿಎಂ, ಗೃಹ ಸಚಿವರು ರಕ್ಷಣೆ ನೀಡುತ್ತಿರುವುದು ಅಕ್ಷಮ್ಯ ಅಪರಾಧವೆಂದು ಎಂದು ಬಿ.ವೈ.ವಿಜಯೇಂದ್ರ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net