ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಆಯೋಗ ವರದಿಗೆ ಆದ್ಯತೆ

Published on

ಮಹಾ ಒಕ್ಕೂಟ ಮನವಿ

ಮಂಗಳೂರು: ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಬಗ್ಗೆ ಮಹತ್ವಪೂರ್ಣ ಅಂಶ ಹಾಗೂ ಶಿಾರಸುಗಳನ್ನು ಒಳಗೊಂಡಿರುವ ನ್ಯಾ.ಎ.ಜೆ. ಸದಾಶಿವ ಆಯೋಗ ಮತ್ತು ಎಚ್. ಕಾಂತರಾಜ್ ನೇತೃತ್ವದ ಆಯೋಗದ ವರದಿ ಬಗ್ಗೆ ಸಾರ್ವಜನಿಕ ಚರ್ಚೆಯಾದ ಬಳಿಕ ರಾಜ್ಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಆಯೋಗವು ನಿಯಮಾನುಸಾರ ವರದಿಗಳ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ/ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಒತ್ತಾಯಿಸಿದೆ.

ಅಂತಿಮವಾಗಿ ಮೂರು ಆಯೋಗಗಳ ವರದಿಗಳನ್ನು ಈಗ ರಚನೆಯಾಗಿರುವ ಸಂಪುಟ ಉಪ ಸಮಿತಿಯು ಸಮಗ್ರವಾಗಿ ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಶಿಾರಸು ಮಾಡುವಂತೆ ಮಾಡಲು ಸರ್ಕಾರವನ್ನು ಆಗ್ರಹಿಸುವಂತೆ ರಾಜ್ಯದ ಆಡಳಿತ ಪಕ್ಷ ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡದ ಸಂಸದರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅವರು ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸುವ ಮೊದಲು ರಾಜ್ಯದ ಪರಿಶಿಷ್ಟ ಜಾತಿಗಳ ವರ್ಗೀಕರಣದ (ಒಳಮೀಸಲಾತಿ) ಕುರಿತು ಶಿಾರಸು ಮಾಡಲು ರಚನೆಯಾಗಿರುವ ಸಚಿವ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯು ಸರ್ಕಾರಕ್ಕೆ ಯಾವುದೇ ಶಿಾರಸು ಮಾಡದಂತೆ ಅವರು ಸಂಸದರನ್ನು ಕೋರಿದ್ದಾರೆ.2005ರಲ್ಲಿ ರಚನೆಯಾಗಿದ್ದ ನ್ಯಾ.ಸದಾಶಿವ ಆಯೋಗ 2012ರಲ್ಲಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು. 2015ರಲ್ಲಿ ಎಚ್.ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಎಲ್ಲ ಜನ ಸಮುದಾಯಗಳ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕುರಿತು ಸಮೀಕ್ಷೆ/ ಅಧ್ಯಯನ ನಡೆಸಿದೆ. ಈ ಆಯೋಗದ ವರದಿಯೂ ಸಿದ್ದಗೊಂಡಿದೆ. ಆದರೆ ನೂರಾರು ಕೋಟಿ ರೂಪಾಯಿ ಜನರ ತೆರಿಗೆ ಹಣ ಹಾಗೂ ಲಕ್ಷಾಂತರ ಸಮೀಕ್ಷೆದಾರರ ಪರಿಶ್ರಮದಿಂದ ರೂಪುಗೊಂಡ ಈ ಎರಡೂ ವರದಿಗಳನ್ನು ರಾಜ್ಯದ ಶಾಸನ ಸಭೆಯಲ್ಲಿ ಮಂಡಿಸಿ, ಸಾರ್ವಜನಿಕ ಚರ್ಚೆ, ಸಮಾಲೋಚನೆಗೆ ಅವಕಾಶ ಕಲ್ಪಿಸಿ ಕೊಡಲು ಪಕ್ಷಭೇವಿಲ್ಲದೆ ಎಲ್ಲ ಸರ್ಕಾರಗಳು ಹಿಂಜರಿದಿವೆ ಎಂದು ಅವರು ಆರೋಪಿಸಿದರು.

ಸತ್ಯ ಮುಚ್ಚಿಡುವ ಸರ್ಕಾರಗಳ ಕುಟಿಲ ನೀತಿಯಿಂದ  ಆಯೋಗಗಳು ನೀಡಿರುವ ವರದಿಗಳ ಬಗ್ಗೆ ಕಪೋಲ ಕಲ್ಪಿತ ವಿಮರ್ಶೆ, ವಿಶ್ಲೇಷಣೆ ನಡೆಯಲು ಆಸ್ಪದವಾಗಿದೆ. ಇಂತಹ ಪ್ರಚಾರಗಳಲ್ಲಿ ನ್ಯಾ.ಸದಾಶಿವ ವರದಿ ಜಾರಿಗೆ ಬಂದರೆ ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿಗಳ ಜನರು ಕೇವಲ ಶೇ. 1ರಷ್ಟು ಮೀಸಲಾತಿ ಮೀಸಲಾತಿ ದೊರೆಯುವುದು ಎನ್ನುವ ಆಘಾತಕರ ಸುದ್ದಿಯೂ ಒಂದು. ಸಂವಿಧಾನದತ್ತವಾದ ಮೀಸಲಾತಿ ನೀತಿಯ ಲ ಈ ಪ್ರವರ್ಗಗಳಲ್ಲಿ ಸೇರ್ಪಡೆಗೊಂಡಿರುವ ಎಲ್ಲ ಜಾತಿಗಳ ಎಲ್ಲ ಜನರಿಗೆ, ಲಿಂಗಭೇದವಿಲ್ಲದೆ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಪದ್ಮನಾಭ ನರಿಂಗಾನ, ಮೋಹನಾಂಗಯ್ಯ ಸ್ವಾಮಿ, ಶಿವಾನಂದ ಬಲ್ಲಾಳ್‌ಬಾಗ್, ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ವಿವಿಧ ಸಮುದಾಯ ಸಂಘಟನೆಗಳ ಮುಖಂಡರಾದ ಸೀತಾರಾಮ್, ಎಂ.ಡಿ. ವೆಂಕಪ್ಪ, ಸುಂದರ ಮೇರ, ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net