VIRAL VIDEO | ಇಲ್ಲೊಂದಿದೆ ಕಾಂಡಂ ಕೆಫೆ; ಅದರಲ್ಲೇ ಮೂಡಿಬಂತು ಕ್ರಿಸ್​ಮಸ್ ಟ್ರೀ..!

condom cafe
Published on

ಬೆಂಗಳೂರು: ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ, ಪ್ರಪಂಚದಾದ್ಯಂತದ ಹೋಟೆಲ್ -ರೆಸ್ಟೋರೆಂಟ್‌ಗಳು ವಿಭಿನ್ನ ಪ್ರಯೋಗ ಮಾಡುತ್ತಲೇ ಇರುತ್ತವೆ. ತಮ್ಮ ರೆಸ್ಟೋರೆಂಟ್‌ನಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸುವುದರಿಂದ ಹಿಡಿದು ಅದನ್ನು ನದಿಯ ಮಧ್ಯದಲ್ಲಿ ನಿರ್ಮಿಸುವವರೆಗೆ, ಮಾಲೀಕರು ಗ್ರಾಹಕರನ್ನು ಸೆಳೆಯಲು ಎಲ್ಲಾ ರೀತಿಯ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಅಂತಹ ಒಂದು ವಿಶಿಷ್ಟ ಪ್ರಯೋಗದಲ್ಲಿ, ಥಾಯ್ಲೆಂಡ್‌ನಲ್ಲಿ ಕಾಂಡೋಮ್ ವಿಷಯವನ್ನೇ ಕೇಂದ್ರೀಕರಿಸಿ ಕೆಫೆಯನ್ನು ತೆರೆಯಲಾಗಿದೆ.

ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಕೆಫೆಯ ಕ್ರಿಸ್​ಮಸ್​ ಸ್ಪೆಷಲ್​ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. Instagramನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಪ್ರತಿಮೆಗಳ ಉಡುಪುಗಳು, ಸಾಂಟಾ ಕ್ಲಾಸ್‌ನ ಗಡ್ಡ, ಕ್ರಿಸ್ಮಸ್ ಮರ, ನೇತಾಡುವ ದೀಪಗಳು ಮತ್ತು ಹೂವುಗಳನ್ನು ಸಂಪೂರ್ಣವಾಗಿ ಕಾಂಡಂಗಳಿಂದ ತಯಾರಿಸಲಾಗಿದೆ. ಇಲ್ಲಿ ಕಾಂಡಂ ಬಳಸಿಕೊಂಡು ಕರಕುಶಲ ವಸ್ತುಗಳನ್ನೂ ತಯಾರಿಸಿ ಮಾರಲಾಗುತ್ತದೆ.

Instagram ಬಳಕೆದಾರ @kolkatadelites ಈ ಕೆಫೆಯ ವಿಡಿಯೋ ಹಂಚಿಕೊಂಡಿದ್ದಾರೆ. ಇವರು ಈ ಕೆಫೆಯನ್ನು ವಿಶ್ವದ ವಿಶಿಷ್ಟ ಕೆಫೆಗಳಲ್ಲಿ ಒಂದು ಎಂದು ಕರೆದಿದ್ದಾರೆ. ಅದಲ್ಲದೇ ಈ ಬಾರಿ ಕ್ರಿಸ್​ಮಸ್​ಗೆ ವಿಶಿಷ್ಟವಾದ ಕ್ರಸ್​ಮಸ್​ ಟ್ರೀಯನ್ನೂ ಇಲ್ಲಿ ತಯಾರಿಸಲಾಗಿದೆ. ಇಲ್ಲಿ ಇಡೀ ಕ್ರಿಸ್​ಮಸ್​​ ಟ್ರೀಯನ್ನೇ ಕಾಂಡಂಗಳಿಂದ ತಯಾರು ಮಾಡಲಾಗಿದೆ. ಇದು ಈ ಬಾರಿ ಕಾಂಡಂ ಕೆಫೆಯ ವಿಶಿಷ್ಟ ಆಕರ್ಷಣೆಯಾಗಿ ಹೊರ ಹೊಮ್ಮಿದೆ ಎಂದೇ ಹೇಳಬಹುದು.

ಈ ಕೆಫೆಗೆ ಹೋದರೆ ವಿಚಿತ್ರ ಅನುಭವ ಆಗುತ್ತೆ ಎಂದು ಭಾವಿಸಬೇಕಿಲ್ಲ. ಸುಂದರವಾಗಿಯೇ ಈ ಕೆಫೆಯನ್ನು ನಿರ್ಮಿಸಲಾಗಿದೆ. ಕಾಂಡಂ ಶಬ್ದ ಕೇಳಿದಾಗ ರೇಜಿಗೆ ಪಡುವ ಜನರು ಒಮ್ಮೆ ಈ ಕೆಫೆಗೆ ಹೋದರೆ ಸಾಕು. ತಾನಾಗಿಯೇ ಅರಿವು ಮೂಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net