ಮತಬ್ಯಾಂಕ್ ರಾಜಕೀಯ ಹೆಚ್ಚಾಗಿದೆ

04 jan tnp 01
Published on

ದಸಂಸ ಸಂಚಾಲಕ ಶಿವಕುಮಾರ್ ಬೇಸರ

 ತಿ.ನರಸೀಪುರ : ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಗಳನ್ನು ಮತಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರ ಹೆಚ್ಚಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದರು.

ಇತ್ತೀಚೆಗೆ ನಿಧನರಾದ ದಸಂಸ ರಾಜ್ಯ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಚಿಂತಕ ಪ್ರೊ.ಮುಜಾಫರ್ ಅಸಾದಿ ಹಾಗೂ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ದಸಂಸ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ದಲಿತ ಚಳವಳಿಯನ್ನು ಹೈಜಾಕ್ ಮಾಡುವುದು, ಕೋಮುವಾದಿ ವಿಚಾರಗಳನ್ನು ಪ್ರತಿಪಾದಿಸುವ ಪ್ರವೃತ್ತಿ ಮಿತಿ ಮೀರಿದೆ. ಈ ಬಗ್ಗೆ ಜನರು ಪ್ರಜ್ಞಾವಂತಿಕೆ ರೂಢಿಸಿಕೊಳ್ಳಬೇಕು ಎಂದರು. ಹಿರಿಯ ಚಿಂತಕರು, ಹೋರಾಟಗಾರರ ಅಕಾಲಿಕೆಯಿಂದ ಚಿಂತನಾಶೀಲ ತಂಡ ಬಡವಾಗುತ್ತಿದೆ ಎಂದವರು ನುಡಿದರು. ದಸಂಸ ತಾಲೂಕು ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್, ಕುಕ್ಕೂರುರಾಜು, ಸಂಘಟನಾ ಸಂಚಾಲಕರಾದ ಕಿರಗಸೂರು ರಜನಿ, ನಾಗರಾಜ ಮೂರ್ತಿ, ಲಕ್ಷ್ಮಣ್, ಕರೋಹಟ್ಟಿ ನಾಗೇಶ್, ಲಿಂಗರಾಜು, ಇಂಡವಾಳು ನಾಗರಾಜು, ಸೋಸಲೆ ಶಿವಣ್ಣ , ಶಾಂತರಾಜು, ನವೀನ್,ತುಂಬಲ ರವಿ, ರಂಗದಾಸ್, ಮಾವಿನಹಳ್ಳಿ ಲಿಂಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net