ಮುಖ್ಯಮಂತ್ರಿಯೊಂದಿಗೆ ಚರ್ಚಿಸುವೆ

HUN-FEB-25-2(EX MLA VISITED TO MUTTURAJ HOUSE)
Published on

ನೊಂದ ಕುಟುಂಬಕ್ಕೆ ಮಾಜಿ ಶಾಸಕ ಮಂಜುನಾಥ್ ಭರವಸೆ
ಹುಣಸೂರು : ಇತ್ತೀಚೆಗೆ ಅನುಮಾನಾಸ್ಪದವಾಗಿ ಮೃತನಾದ ಕಾಲೇಜು ವಿದ್ಯಾರ್ಥಿ ತಾಲೂಕಿನ ದಾಸನಪುರದ ಮುತ್ತುರಾಜ್‌ರ ಮನೆಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಶನಿವಾರ ಭೇಟಿ ಇತ್ತು ಕುಟುಂಬಕ್ಕೆ ಸಾಂತ್ವನ ಹೇಳಿದರು. ಮುತ್ತುರಾಜ್‌ನ ತಂದೆ ರವಿಕುಮಾರ್ ಘಟನೆ ಸಂಬಂಧ ಮಾಹಿತಿ ನೀಡಿ, ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದೇವೆ, ನನಗೆ ದಿಕ್ಕೇ ತೋಚದಂತಾಗಿದೆ. ಆತ ಏನಾದರೂ ತಪ್ಪು ಮಾಡಿದ್ದರೆ, ತಮಗೆ ಅಥವಾ ಪೊಲೀಸರಿಗೆ ತಿಳಿಸಬೇಕಿತ್ತು. ಅದು ಬಿಟ್ಟು ಆತನ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾಗಿರುವುದು ಆತಂಕ ಉಂಟುಮಾಡಿದ್ದು, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಕೇಳಿದರು. ಈ ಸಂಬಂಧ ಡಿವೈಎಸ್‌ಪಿ ಗೋಪಾಲಕೃಷ್ಣರಿಂದ ಆಗಿರುವ ಘಟನೆ ಹಾಗೂ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಮಂಜುನಾಥ್, ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಸಂಬಂಧ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವೆನೆಂದರು.
ಗ್ರಾ.ಪಂ.ಸದಸ್ಯ ರಾಘವೇಂದ್ರ, ತಾ.ಪಂ.ಮಾಜಿ ಸದಸ್ಯ ವೆಳ್ಳಂಗಿರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಹೇಶ್, ಗೋವಿಂದಶೆಟ್ಟಿ, ದಿನೇಶ್, ಚಂದ್ರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net