ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ

19ckm8-dss protest
ಮಣಿಪುರ ಹಿಂಸಾಚಾರ ಮತ್ತು ಸೌಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ತುಡುಕೂರು ಯೋಗೇಶ್, ಬಸವರಾಜ್, ಕೆ.ಕೆ.ಬಾಬು, ಜಲಜಾ ಇದ್ದರು.
Published on

ಚಿಕ್ಕಮಗಳೂರು: ಮಣಿಪುರ ಹಿಂಸಾಚಾರ ಮತ್ತು ಸೌಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಅಜಾದ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸಮಿತಿ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಮಾತನಾಡಿ, ಮಣಿಪುರದ ಕುಕ್ಕಿಸ್ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಇದನ್ನು ತಡೆಯುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮೂರು ತಿಂಗಳಿನಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಘರ್ಷಣೆ ಮರುಕಳಿಸಿ ಮೂವರ ಹತ್ಯೆಯಾಗಿದೆ. ಕೂಡಲೇ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಒದಗಿಸಿ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸೌಜನ್ಯ ಹತ್ಯೆ ನೈಜ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಸಮಿತಿ ಜಿಲ್ಲಾ ಸಹ ಸಂಚಾಲಕ ತುಡುಕೂರು ಯೋಗೇಶ್, ಸಂಘಟನಾ ಸಂಚಾಲಕ ಬಸವರಾಜ್, ಖಜಾಂಚಿ ಕೆ.ಕೆ.ಬಾಬು, ಮಹಿಳಾ ಸಹ ಸಂಚಾಲಕಿ ಜಲಜಾ, ತಾಲೂಕು ಸಂಚಾಲಕ ಸತೀಶ್, ಗಿರೀಶ್, ಮುಖಂಡರಾದ ಶ್ರೀನಿವಾಸ್, ಜಾನಕಿ, ಶಂಕರ್, ಶಿವಣ್ಣ, ಆನಂದ್, ಸಿದ್ದಯ್ಯ, ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net