

ಮದ್ದೂರು : ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ವಿವೇಕ ಚಿಂತನ ಸೇವಾ ಸೊಸೈಟಿ ಅಧ್ಯಕ್ಷ ಕೆ.ಸಿ.ರವೀಂದ್ರ ತಿಳಿಸಿದರು.
ಪಟ್ಟಣದ ಎಂ.ಎಚ್.ಚೆನ್ನೇಗೌಡ ವಿದ್ಯಾನಿಲಯದ ಅಂಗ ಸಂಸ್ಥೆಗಳಾದ ಎಚ್.ಕೆ ಮರಿಯಪ್ಪ ಕಾನ್ವೆಂಟ್‌ಗೆ 4, ಜವಾಹರ್ ಪ್ರೌಢಶಾಲೆಗೆ 2 ಹಾಗೂ ಕಸ್ತೂರ ಬಾ ಉನ್ನತ ಪ್ರಾಥಮಿಕ ಶಾಲೆಗೆ 2 ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಂಘ, ಸಂಸ್ಥೆಗೆಳು ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು. ಮುಂದಿನ ದಿನಗಳಲ್ಲಿ ಕಮಲಾ ನೆಹರು ಬಾಲಿಕಾ ಪ್ರೌಢಶಾಲೆಗೆ ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡುವುದಾಗಿ
ಅವರು ತಿಳಿಸಿದರು. ಸೊಸೈಟಿಯ ಕಾರ್ಯದರ್ಶಿ ಕೃಷ್ಣ, ಶಾಂತಕುಮಾರ್, ವಸಂತ.ಪ್ರಭು, ಸಿ.ಅಪೂರ್ವಚಂದ್ರ , ಎಂ.ಸ್ವರೂಪ ಚಂದ್ರ ಮತ್ತು ಮುಖ್ಯ ಶಿಕ್ಷಕರು ಇದ್ದರು.