

ಬೇಲೂರು: ತಾಲೂಕಿನ ಅರೇಹಳ್ಳಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ, ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಿರಿಯ ಪ್ರಾಥಾಮಿಕ ಶಾಲಾ ಮಕ್ಕಳ 2025-26ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅರೇಹಳ್ಳಿ ಮಲ್ನಾಡ್ ಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
2025-26ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅರೇಹಳ್ಳಿಯ ಮಲ್ನಾಡ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನು ಪಡೆದು ವೈಯಕ್ತಿಕ ವಿಭಾಗದಲ್ಲಿ ಶ್ರೀಜಾ ಮೆನನ್ ಮತ್ತು ಬಾಲಕಿಯರು ಒಟ್ಟಾರೆ ಕ್ರೀಡಾಕೂಟದಲ್ಲಿ 73 ಅಂಕಗಳನ್ನು ಪಡೆಯುವ ಮೂಲಕ ಈ ಸಾಲಿನ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ಕಾರ್ತಿಕ್-ಉದ್ದ ಜಿಗಿತ(ದ್ವಿ), ಸಂಜಯ್-400 ಮೀ ಓಟ(ದ್ವಿ), ಮದನ್-400 ಮೀ ಓಟ(ತೃ), ನಿಶ್ಚಿತ್-200 ಮೀ ಓಟ(ತೃ), ಕಾರ್ತಿಕ್-100 ಮೀ ಓಟ(ತೃ), ಗುಂಪು ವಿಭಾಗ: ಕಬಡ್ಡಿ (ಪ್ರ), 4*100 ರಿಲೇ-(ದ್ವಿ), ಥ್ರೋ ಬಾಲ್-(ದ್ವಿ) ಬಾಲಕಿಯರ ವಿಭಾಗದಲ್ಲಿ ಶ್ರೀಜಾ ಮೆನನ್-ಉದ್ದ ಜಿಗಿತ, ಎತ್ತರ ಜಿಗಿತ(ಪ್ರ) 100 ಮೀ(ದ್ವಿ), ನೂರ್ ಜೋಯಾ-ಡಿಸ್ಕಸ್ ಎಸೆತ(ಪ್ರ), ಗುಂಡು ಎಸೆತ(ತೃ), ಎಸ್.ಎಸ್.ಅನನ್ಯಾ 400 ಮೀ ಓಟ(ದ್ವಿ) ಹಾಗೂ ಡಿಸ್ಕಸ್ ಎಸೆತ (ದ್ವಿ), ಎಚ್.ಎಂ.ವಿಂದು ಗೌಡ-600 ಮೀ(ದ್ವಿ), ನಿರೀಕ್ಷಾ-200 ಮೀ ಓಟ(ತೃ), ಗುಂಪು ವಿಭಾಗದಲ್ಲಿ ವಾಲಿಬಾಲ್-ಪ್ರಥಮ, 4*100 ರಿಲೇ: ದ್ವಿತೀಯ ಸ್ಥಾನ ಪಡೆದಿದ್ದು, ಈ ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ, ಸಿಬ್ಬಂದಿ ಅಭಿನಂದಿಸಿದ್ದಾರೆ.