

ಚಿತ್ರದುರ್ಗ: ನಗರದ ಐಯುಡಿಪಿ ಲೇಔಟ್‌ನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ಅನುದಾನವನ್ನೂ ಬಿಡು ಗಡೆ ಮಾಡಿದ್ದೇನೆ,ಇಲ್ಲಿಯ ರಸ್ತೆಗಳ ಸಹಿತ ಲೇಔಟ್‌ನ್ನು ಹಂತ,ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜಿ. ಎಚ್.ತಿಪ್ಪಾರೆಡ್ಡಿ ಹೇಳಿದರು.
ಐಯುಡಿಪಿ ಬಡಾವಣೆ 11ನೇ ಕ್ರಾಸ್‌ನಲ್ಲಿ ಶುಕ್ರವಾರ 2.80 ಕೋಟಿ ರೂ.ಅನುದಾನದಲ್ಲಿ ನಿರ್ಮಿಸುತ್ತಿರುವ ನೂತನ ಸಿ.ಸಿ.ರಸ್ತೆ ಕಾ ಮಗಾರಿಗೆ ಚಾಲನೆ ನೀಡಿ ಮಾತನಾಡಿ,ಈ ಲೇಔಟ್ ದೊಡ್ಡದಾಗಿದೆ. ಹೆಚ್ಚು ರಸ್ತೆಗಳು ಬರುತ್ತವೆ. ಶಾಸಕರ,ನಗರಸಭೆ,ಅಮೃತ,ಐಯು ಡಿಪಿ ಅಭಿವೃದ್ಧಿ ಅನುದಾನಗಳನ್ನು ಬಳಸಿ ಸಿ.ಸಿ ರಸ್ತೆಗಳನ್ನು ಮಾಡಲಾಗುತ್ತಿದೆ.
ಅನೇಕ ರಸ್ತೆಗಳ ಉದ್ಘಾಟನೆಯಾಗಿವೆ. ಪ್ರಸ್ತುತ ಆರು ರಸ್ತೆಗಳ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು,20 ದಿನದೊಳಗೆ ಕಾ ಮಗಾರಿ ಪೂರ್ಣಗೊಳ್ಳಲಿದೆ. ಇಲ್ಲಿ ನೀರಿನ ಸಮಸ್ಯೆ ಇಲ್ಲ,ಬೀದಿ ದೀಪಗಳನ್ನು ಸಹ ಹಾಕಲಾಗಿದೆ. ಉಳಿದಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿ ಸಬೇಕಿದೆ.
ಈ ಭಾಗದಲ್ಲಿ ಹಿರಿಯ ನಾಗರಿಕರಿಗೆ,ವಿಧವಾ ವೇತನ,ಅಂಗವಿಕಲರಿಗೆ ಪಿಂಚಣಿ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತೆಗೆದುಕೊಂಡು ಬರು ವಂತೆ ಸ್ಥಳೀಯರಿಗೆ ಮನವಿ ಮಾಡಿದರು. ಸಾವಿರಾರು ಜನರ ಬದುಕಿಗೆ ಪಿಂಚಣಿ ನೆರವಾಗಿದೆ,ಅವರಿಗೆ ತೊಂದರೆಯಾಗಬಾರದು ಎಂದ ರು. ನಗರಸಭೆ ಸದಸ್ಯ ಭಾಸ್ಕರ್,ಮುಖಂಡರಾದ ಜಗದೀಶ್,ದಸ್ತಗಿರಿ,ಮೈಲಪ್ಪ,ಮಂಜುನಾಥ್,ಇಂಜಿನಿಯರ್‌ಗಳಾದ ಮಂಜುನಾಥ್ ಗಿರೆಡ್ಡಿ,ಕಿರಣ್ ಮತ್ತಿತರರು ಇದ್ದರು.