ಸಮಗ್ರ ಅಭಿವೃದ್ಧಿ ಚರ್ಚೆ, ಅನುಮೋದನೆ

vemgal-kurgal
ವೇಮಗಲ್​-ಕುರಗಲ್​ ಪಟ್ಟಣ ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅಧ್ಯೆ ಡಿ.ಅನುಷಾ ಮಾತನಾಡಿದರು. ಸಿ.ಎಸ್​.ವೆಂಕಟೇಶ್​, ಎಸ್​.ಎಂ.ವೆಂಕಟೇಶ್​ ಇದ್ದರು.
Published on

ವೇಮಗಲ್​: ಅಮೃತ್​ ಸಿಟಿ-2.0 ಯೋಜನೆಯಡಿ 3 ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ 26.72 ಲಕ್ಷ ರೂ. ನಿಗದಿ, ಲಭ್ಯವಿರುವ ಕಡೆ 19 ಟ್ವಿನ್​ ಡಸ್ಟ್​ ಬಿನ್​ ಅಳವಡಿಕೆ, ಕುಡಿಯುವ ನೀರು, ಶುಚಿತ್ವ ಹೀಗೆ ಹಲವು ಅಭಿವೃದ್ಧಿ ಕಾರ್ಯಕ್ಕೆ ವೇಮಗಲ್​ ಪಟ್ಟಣ ಪಂಚಾಯಿತಿಯಲ್ಲಿ ಅನುಮೋದನೆ ದೊರಕಿತು.

ಕೋಲಾರ ತಾಲೂಕು ವೇಮಗಲ್​ ಪಪಂನಲ್ಲಿ ಅಧ್ಯೆ ಡಿ.ಅನುಷಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಮೊದಲ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿ ಕುರಿತು ವ್ಯಾಪಕ ಚರ್ಚೆ ನಡೆದು ಹಲವು ಯೋಜನೆಗಳಿಗೆ ಸರ್ವ ಸದಸ್ಯರೂ ಸಮ್ಮತಿ ನೀಡಿದರು.

ಎಸ್​ಬಿಎಂ, ಎಸ್​ಎಫ್​ಸಿಎಸ್​ ಮುಕ್ತ ನಿಧಿಯಿಂದ ಸರ್ವೇ ನಂ.36ರಲ್ಲಿ ಮುಂದುವರಿದ ಕಾಂಪೌಂಡ್​ ಕಾಮಗಾರಿಗೆ 20.30 ಲಕ್ಷ ರೂ., ಸಮರ್ಪಕ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ 30 ಲಕ್ಷ ರೂ., ಆಂತರಿಕ ರಸ್ತೆ ಮತ್ತು ಕಲ್ವರ್ಟ್​ ನಿರ್ಮಾಣ ಕಾಮಗಾರಿಗೆ <15.49 ಲಕ್ಷ, ಶೌಚಗೃಹ ಕಾಮಗಾರಿಗೆ <6 ಲಕ್ಷ, ಪಟ್ಟಣ ಪಂಚಾಯಿತಿ ಕಚೇರಿಯ ಕೌನ್ಸಿಲ್​ ಹಾಲ್​ ಕಾಮಗಾರಿಗೆ <7.72 ಲಕ್ಷ, ಟೇಬಲ್​ ಕುರ್ಚಿ ಮತ್ತು ವಿದ್ಯುದ್ದೀಕರಣಕ್ಕೆ <3.94 ಲಕ್ಷ, ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ದುರಸ್ತಿ ಮತ್ತು ಶೌಚಗೃಹಕ್ಕೆ <3.42 ಲಕ್ಷ, ಕುರುಗಲ್​ ಡಾ.ಬಿ.ಆರ್​ ಅಂಬೇಡ್ಕರ್​ ಭವನಕ್ಕೆ ಪೀಠೋಪಕರಣ ಖರೀದಿಸಲು <1.91 ಲಕ್ಷ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್​ ನಂ.5ರ ಚಂದ್ರಶೇಖರಪುರ, 6ನೇ ವಾರ್ಡ್​ನ ಸುಳದೇನಹಳ್ಳಿಗಳ ಶುದ್ಧ ಕುಡಿಯುವ ನೀರಿನ ಟಕಗಳ ಅಳವಡಿಕೆಗೆ ತಲಾ <8.77ಲಕ್ಷ, ಮಿನಿ ಸ್ಟೇಡಿಯಂ, ಎಂ.ಆರ್​.ಎಫ್​ ಶೆಡ್​ಗೆ ವಿದ್ಯುದ್ದೀಕರಣಕ್ಕಾಗಿ ಕಂಬಗಳು, ಎಲ್​ಇಡಿ ಲೈಟ್​ ಹಾಗೂ ಕೇಬಲ್​ ಅಳವಡಿಗೆ <14.19 ಲಕ್ಷ ಅನುದಾನ ನೀಡಲು ಅನುಮೋದಿಸಲಾಯಿತು.

ಖಾತೆ ನೀಡುವ ವಿಚಾರ, ರಸ್ತೆ ದುರಸ್ತಿ, ಅಭಿವೃದ್ಧಿಗೆ ಹಣ ಕ್ರೋಡಿಕರಣ, ವಾರ್ಡ್​ಗಳ ಅಭಿವೃದ್ಧಿಗೆ ಹಣ ನಿಗದಿ, ಈ ಹಿಂದೆ ಲೇಔಟ್​ಗಳಿಗೆ ಮೂಲಸೌಕರ್ಯ ನೀಡದೇ ಖಾತೆ ಮಾಡಿ ಮಾರಾಟ ಮಾಡಿರುವ ಬಡಾವಣೆ ಮಾಲೀಕರಿಗೆ ಮತ್ತು ಸಂಬಂಧಪಟ್ಟವರಿಗೆ ನೋಟಿಸ್​ ನೀಡಿ ಸೌಲಭ್ಯ ಕಲ್ಪಿಸಲು ಎಚ್ಚರಿಕೆ ನೀಡಲು ತೀರ್ಮಾನಿಸಿದರು.

ಉಪಾಧ್ಯಕ್ಷ ಸಿ.ಎಸ್​.ವೆಂಕಟೇಶ್​, ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​, ಸದಸ್ಯರಾದ ಅಂಜಲಿ ಪ್ರಕಾಶ್​, ರಾಮು, ರವಿಚಂದ್ರ, ಲೋಕೇಶ್​ ಮರಿಯಪ್ಪ, ಜಿ.ಮಂಜುಳಾ ಮುನಿರಾಜು, ಸುಬ್ರಮಣ್ಯ, ಕೆ.ಎನ್​.ರಮೇಶ್​, ತಾಸುಪ್​ ಖಾನ್​, ಗಂಗಪ್ಪ, ಮುನಿರಾಜು, ಎಂ.ಶಿಲ್ಪ ಶಂಕರ್​, ವಿ.ಎಂ.ನಾಗೇಶ್​, ದೀಪಾ ವೆಂಕಟೇಶ್​, ಸುಜಾತಾ ಮುನಿರಾಜು, ಶಶಿಕಲಾ ನಾಗೇಶ್​ ಇದ್ದರು.

* ಕಸ ವಿಲೇಗೆ 9.30 ಎಕರೆ ಜಾಗ ಮಂಜೂರು

ವೇಮಗಲ್​&ಕುರಗಲ್​ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿಗಾಗಿ ಸ್ಥಳಿಯ ಮುಖಂಡರ ಸಹಕಾರದಿಂದ ಜಿಲ್ಲಾಡಳಿತದ ಮೇಲೆ ಒತ್ತಡ ತಂದು 9.30 ಎಕರೆ ಜಮೀನನ್ನು ಮಂಜೂರು ಮಾಡಿಸುವಲ್ಲಿ ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​ ಅವರ ಪಾತ್ರ ಪ್ರಮುಖವಾಗಿದೆ ಎಂದು ಸದಸ್ಯರೆಲ್ಲರೂ ಶ್ಲಾಘಿಸಿದರು.

* ತಲಾ 6 ಲಕ್ಷ ರೂ.

ಜನ ನಮ್ಮ ಮೇಲೆ ನಿರೀೆ ಇಟ್ಟುಕೊಂಡು ಮತ ಹಾಕಿದ್ದಾರೆ. ಆಗಬೇಕಾಗಿರುವ ಕಾಮಗಾರಿ ಬಗ್ಗೆ ಸಭೆಯಲ್ಲಿ ಗಮನಕ್ಕೆ ತಂದು ಅನುಮೋದನೆ ಪಡೆದುಕೊಳ್ಳಬಹುದು. ಸದ್ಯಕ್ಕೆ ತಲಾ 6 ಲಕ್ಷ ರೂ. ನೀಡಲಾಗುವುದು. ಜಾಗರೂಕರಾಗಿ ಆಗಬೇಕಾದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಅಧ್ಯೆ ಅನುಷಾ ಹೇಳಿದರು.

* ವಾರ್ಷಿಕ 1.20 ಕೋಟಿ ಆದಾಯ

ಪಪಂನಲ್ಲಿ ವಸತಿ, ಕೈಗಾರಿಕೆ, ವಾಣಿಜ್ಯ ಸೇರಿ ಒಟ್ಟಾರೆ 10,900 ಆಸ್ತಿಗಳಿದ್ದು, ಸುಮಾರು 1.20 ಕೋಟಿ ರೂ. ಆದಾಯ ನಿರೀಸಲಾಗಿದೆ. ನೀರಿನ ಸಂಪರ್ಕದಿಲೂ ಆದಾಯ ವೃದ್ಧಿಸಿಕೊಳ್ಳಬಹುದು. ತೆರಿಗೆ ಪಾವತಿ ಮಾಡುವಂತೆ ಸಾರ್ವಜನಿಕರನ್ನು ಮನವೊಲಿಸಲು ಸದಸ್ಯರ ಸಹಕಾರ ಬೇಕು ಎಂದು ಮುಖ್ಯಾಧಿಕಾರಿ ವೆಂಕಟೇಶ್​ ಹೇಳಿದರು. ಹಿಂದೆ ಚುನಾಯಿತ ಮಂಡಳಿ ಇಲ್ಲದ ಕಾರಣ 15ನೇ ಹಣಕಾಸು ಯೋಜನೆ ಬರಲಿಲ್ಲ. ಚುನಾವಣೆ ನಡೆದು ಆಡಳಿತ ಮಂಡಳಿ ರಚನೆಯಾದ ಕೂಡಲೇ ಬಾಕಿ ಇರಿಸಿಕೊಂಡಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರದ ಮಂಜೂರಾತಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇದು ಬಿಡುಗಡೆಯಾದರೆ ಸುಮಾರು 5 ಕೋಟಿ ರೂ. ಅನುದಾನ ಬರುತ್ತದೆ. ಸದಸ್ಯರು ಸರ್ಕಾರದ ಹಂತದಲ್ಲಿ ಒತ್ತಡ ಹೇರಬೇಕಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net