ವ್ಯಾಸ ಮಹರ್ಷಿ ಗುರುಕುಲಕ್ಕೆ ಸಮಗ್ರ ಪ್ರಶಸ್ತಿ

25hos1p-sports
ಹೊಸನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಶ್ರೀ ವ್ಯಾಸಮಹರ್ಷಿ ಗುರುಕುಲದ ವಿದ್ಯಾರ್ಥಿಗಳು.
Published on

ಹೊಸನಗರ: ತಾಲೂಕಿನ ಮಾರುತಿಪುರದಲ್ಲಿ ಆಯೋಜಿಸಿದ್ದ 14 ವರ್ಷದೊಳಗಿನವರ ಹಿರಿಯ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಟ್ಟೆಮಲ್ಲಪ್ಪ ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಮಗ್ರ ಪ್ರಶಸ್ತಿ ಪಡೆದಿದೆ.

ಮಾರುತಿಪುರ ಹಾಗೂ ಆಲಗೇರಿಮಂಡ್ರಿ ಕ್ಲಸ್ಟರ್ ಕ್ರೀಡಾಕೂಟದಲ್ಲಿ ಗುರುಕುಲದ ಮಕ್ಕಳು ಕ್ಲಸ್ಟರ್ ಮಟ್ಟದಲ್ಲಿ ಸತತ ನಾಲ್ಕನೇ ಬಾರಿ ಚಾಂಪಿಯನ್ ಆಗಿದ್ದಾರೆ.
ವೈಯಕ್ತಿಕ ಸಾಧನೆ: ಚುಕ್ಕಿ ಎಂ. ಬ್ಯಾಣದ -100 ಮೀ. ಓಟ, 400 ಮೀ. ಓಟ, ಉದ್ದ ಜಿಗಿತ ಸ್ಪರ್ಧೆಗಳಲ್ಲಿ (ಪ್ರಥಮ). ಪ್ರೇಕ್ಷಾ- 200 ಮೀ.ಓಟ (ಪ್ರಥಮ), ಎತ್ತರ ಜಿಗಿತ (ದ್ವಿತೀಯ), ರಿಷಿ - 600 ಮೀ. ಓಟ (ಪ್ರಥಮ), 100 ಮೀ. ಓಟ (ತೃತೀಯ). ಸುದೀಕ್ಷಾ- 600 ಮೀ. ಓಟ (ಪ್ರಥಮ), ಪವಿತ್ರಾ- 600 ಮೀ. ಓಟ (ತೃತೀಯ). ಅಮೋಘ- 400 ಮೀ. ಓಟ (ದ್ವಿತೀಯ).
ರಿಲೇ: ಚುಕ್ಕಿ ಎಂ. ಬ್ಯಾಣದ ತಂಡ (ಪ್ರಥಮ), ಬಾಲಕಿಯರ ಖೋ-ಖೋ (ದ್ವಿತೀಯ), ಬಾಲಕರ ಖೋ-ಖೋ ಪ್ರಥಮ ಸ್ಥಾನ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net