

ಹುಣಸೂರು: ತಾಲೂಕಿನ ಹಗರನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ನಗರದ ರೋಟರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯೊಂದಿಗೆ ಚಾಂಪಿಯನ್ ಪಟ್ಟ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಎರಡು ದಿನಗಳ ಕಾಲ ಆಯೋಜನೆಗೊಂಡಿದ್ದ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ 100 ಮೀ. ಓಟ, 200ಮೀ. ಓಟ ಮತ್ತು ಎತ್ತರಜಿಗಿತದಲ್ಲಿ ವಿದ್ಯಾಸಂಸ್ಥೆಯ ಕ್ರೀಡಾಪಟು ಜಸ್ವಂತ್ ಪ್ರಥಮ ಸ್ಥಾನ ಗಳಿಸಿದ್ದಾರೆ. 800 ಮೀ. ಓಟದಲ್ಲಿ ಸಂಜಯ್ ಪ್ರಥಮ, 3000 ಮೀ. ಓಟದಲ್ಲಿ ರಾಕೇಶ್ ಪ್ರಥಮ ಸ್ಥಾನ ಗಳಿಸಿದ್ದಾರೆ. 4100ಮೀ. ರಿಲೇಯಲ್ಲಿ ಆರ್.ಸಂಜಯ್, ಡಿ.ಸಂಜಯ್, ಜಸ್ವಂತ್ ಮತ್ತು ನಂದೀಶ್‌ರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಗಳಿಸಿದೆ. ಅಲ್ಲದೆ 4400ಮೀ. ರಿಲೇಯಲ್ಲೂ ಮಲ್ಲಿಕಾರ್ಜುನ, ಸೃಜನ್, ರಾಕೇಶ್ ಮತ್ತು ಸುಮಂತ್‌ರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಗಳಿಸಿದೆ. ಗುಂಡು ಎಸೆತದಲ್ಲಿ ಅರ‌್ಮಾನ್ ಷರೀಫ್ ತೃತೀಯ ಹಾಗೂ ಡಿಸ್ಕಸ್ ಥ್ರೋನಲ್ಲಿ ಪ್ರೀತಮ್ ತೃತೀಯಸ್ಥಾನ ಗಳಿಸಿದದ್ದಾರೆ.ಥ್ರೋಬಾಲ್ ಪಂದ್ಯಾವಳಿಯಲ್ಲಿ ರೋಟರಿ ತಂಡ ದ್ವೀತೀಯ ಸ್ಥಾನ ಗಳಿಸಿದೆ.
ಬಾಲಕಿಯರ ವಿಭಾಗ: 200ಮೀ.ಓಟದ ಸ್ಪರ್ಧೆಯಲ್ಲಿ ಸಾನಿಯಾ ದ್ವಿತೀಯ ಸ್ಥಾನ, 400ಮೀ. ಓಟದಲ್ಲಿ ಧನ್ಯಶ್ರೀ ದ್ವಿತೀಯ, 800ಮೀ. ಓಟದ ಸ್ಪರ್ಧೆಯಲ್ಲಿ ಲೋಚನಾ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಗುಂಡು ಎಸೆತದಲ್ಲಿ ಸ್ಪಂದನಾ ದ್ವಿತೀಯ ಸ್ಥಾನ ಪಡೆದಿದ್ದಾರೆ. 4*400ಮೀ. ರಿಲೇಯಲ್ಲಿ ಸಿಂಚನಾ, ಧನ್ಯಶ್ರೀ, ಲೋಚನಾ ಮತ್ತು ಸಾನಿಯರನ್ನೊಳಗೊಂಡ ತಂದ ಪ್ರಥಮ ಸ್ಥಾನ ಪಡೆಯಿತು. ಡಿಸ್ಕಸ್ ಥ್ರೊನಲ್ಲಿ ಚಿದ್ಭವಿ ದ್ವಿತೀಯಸ್ಥಾನ ಹಾಗೂ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಧನ್ಯಶ್ರೀ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು. ಕ್ರೀಡಾಪಟುಗಳ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿಯ ಚೇರ‌್ಮನ್ ಡಾ.ಚಂದ್ರನಂದನ್, ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಮುಖ್ಯಶಿಕ್ಷಕಿ ದೀಪಾ ಅಭಿನಂದಿಸಿದ್ದಾರೆ. ತರಬೇತುದಾರರಾದ ಪ್ರಸನ್ನ ಮತ್ತು ಕಾವ್ಯರನ್ನು ಆಡಳಿತ ಮಂಡಳಿ ಅಭಿನಂದಿಸಿದೆ.