ಕಲ್ಪತರು ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

18hbd1..
ಹಳೇಬೀಡಿನ ಕೆ.ಪಿ.ಎಸ್. ಶಾಲಾ ಮೈದಾನದಲ್ಲಿ ಮುಕ್ತಾಯಗೊಂಡ ಬೇಲೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಟ್ಟಣದ ಕಲ್ಪತರು ಕಾಲೇಜಿನ ಕ್ರೀಡಾಪಟುಗಳು.
Published on

ಹಳೇಬೀಡು: ಬೇಲೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಲ್ಪತರು ಕಾಲೇಜು ಸತತ ಮೂರನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಹಳೇಬೀಡಿನ ಕೆಪಿಎಸ್ ಶಾಲಾ ಆವರಣದಲ್ಲಿ ಪದವಿ ಪೂರ್ವ ಕಾಲೇಜುಗಳ ಶಿಕ್ಷಣ ಇಲಾಖೆ ಹಾಗೂ ಎಸ್‌ಜಿಆರ್ ಪದವಿ ಕಾಲೇಜು ಸಹಯೋಗದೊಂದಿಗೆ ಮಂಗಳವಾರ ಹಾಗೂ ಬುಧವಾರ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಳೇಬೀಡಿನ ಕಲ್ಪತರು ಪದವಿ ಪೂರ್ವ ಕಾಲೇಜು ಸಮಗ್ರ ಸಾಧನೆಯನ್ನು ಮಾಡಿದೆ.

ಬಾಲಕರ ಗುಂಪು ವಿಭಾಗದಲ್ಲಿ ಖೋ ಖೋ, ವಾಲಿಬಾಲ್, ಥ್ರೋಬಾಲ್ ಪ್ರಥಮ ಹಾಗೂ ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ಗಳಿಸಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ರಿಲೇ 4ಗಿ100 ಮತ್ತು 4ಗಿ400 , 3ಗಿ000 , 1ಗಿ500 ಮತ್ತು 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಬಾಲಕರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಬಾಲಕಿಯರ ವಿಭಾಗದಲ್ಲಿ 3000 ಮೀ. ಪ್ರಥಮ ಮತ್ತು ದ್ವಿತೀಯ, 1500 ಮೀಟರ್ ಓಟ ಪ್ರಥಮ ಮತ್ತು ದ್ವಿತೀಯ, 400ಗಿ400 ರಿಲೇ ಪ್ರಥಮ, ಥ್ರೋಬಾಲ್, ಖೋ ಖೋ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಕಲ್ಪತರು ಕಾಲೇಜಿಗೆ ಒಲಿದಿದೆ.

ಮಿಂಚಿನ ಓಟಗಾರ ರೋಹಿತ್: 3000 ಮೀಟರ್, 1500 ಮೀಟರ್ ಹಾಗೂ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಿಲೇಯಲ್ಲೂ ಮೊದಲಿಗರಾಗಲು ಶ್ರಮಿಸಿದ ಮತ್ತು ಕ್ರೀಡಾಕೂಟದಲ್ಲಿ ವೇಗದ ಓಟಗಾರ ಎಂಬ ಕೀರ್ತಿಗೆ ಕಾಲೇಜಿನ ವಿದ್ಯಾರ್ಥಿ ರೋಹಿತ್ ಪಾತ್ರರಾಗಿದ್ದಲ್ಲದೆ, ಬಾಲಕರ ವೈಯಕ್ತಿಕ ಚಾಂಪಿಯನ್‌ಷಿಪ್ ಕೂಡ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.

ಸತತ 13 ವರ್ಷಗಳಿಂದ ಶಾಲೆಗೆ ಪ್ರಶಸ್ತಿ: ಕಲ್ಪತರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಪ್ರಾರಂಭದಿಂದ ಇಂದಿನ ಕ್ರೀಡಾಕೂಟದವರೆಗೂ ಖೋ ಖೋ ಪಂದ್ಯಾವಳಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನವನ್ನೇ ಗಳಿಸುವ ಮೂಲಕ ತಾಲೂಕಿನಲ್ಲಿ ಐತಿಹಾಸಿಕ ಗೆಲುವನ್ನು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕ. ಸುರೇಶ್ ಹೇಳಿದರು. ಬುಧವಾರ ಸಂಜೆ ಕ್ರೀಡಾಕೂಟಕ್ಕೆ ಆಗಮಿಸಿ ಬಹುಮಾನ ವಿತರಣೆ ಮಾಡಿದ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳು ಉತ್ತಮ ಸಾಧನೆಯನ್ನು ಮಾಡಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಅದನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಊರಿಗೆ, ರಾಷ್ಟ್ರಕ್ಕೆ ಹೆಸರು ಮತ್ತು ಕೀರ್ತಿ ತರಬೇಕು ಎಂದು ಆಶಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಉಪಾಧ್ಯಕ್ಷೆ ಸುಮಾ ವೆಂಕಟೇಶ್ ಎಪಿಎಂಸಿ ಅಧ್ಯಕ್ಷ ಸೋಮಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯೆ ವಿನುತಾ, ಗ್ರಾಪಂ ಸದಸ್ಯ ಮೋಹನ್, ಪ್ರೇಮಣ್ಣ, ಮುಖಂಡ ಚೇತನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net