ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ: ಶಾಸಕಿ ಮಂಜುಳಾ ಲಿಂಬಾವಳಿ ಸೂಚನೆ.

arvind
Published on

ಬೆಂಗಳೂರು: ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ದೃಷ್ಠಿಯಿಂದ ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಕಾಮಗಾರಿಗಳನ್ನು ಮಾಡುವಂತೆ ಶಾಸಕಿ ಮಂಜುಳಾ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹದೇವಪುರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರುಸ್ತುತ ಚಾಲ್ತಿಯಲ್ಲಿರುವ ಎಲ್ಲ ರೀತಿಯ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಸಾರ್ವಜನಿಕರಿಗೆ ಅನುಕೂಲವಾಗುಂತೆ ಹಾಗೂ ಕಾಮಗಾರಿಗಳು ನಡೆಯುವ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ತಿಳಿಸಿದರು.

ಕೊಡತಿ, ಕಾಚಮಾರನಹಳ್ಳಿಯ ರಸ್ತೆ ಅಭಿವೃದ್ಧಿ ಕಾಮಗಾರಿ, ಗರುಡಾಚಾರ್‌ಪಾಳ್ಯದ ಶೆಟ್ಟಿ ಲೇಔಟ್‌ನಲ್ಲಿ ಯುಜಿಡಿ ಪೈಪ್‌ಲೈನ್ ಅಳವಡಿಕೆ, ಕಾಡುಗೋಡಿಯ ಪಟಾಲಮ್ಮ ಲೇಔಟ್‌ನ ಗೋಡೌನ್ ರಸ್ತೆಯಲ್ಲಿ ಕಾವೇರಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಅಳವಡಿಕೆ ಕಾಮಗಾರಿ ,ಮುನ್ನೇಕೊಳಾಲ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ತಿರ ಗ್ರೀನ್ ಗಾರ್ಡನ್ ಲೇಔಟ್, ಸಿ. ಕೆ. ಬಿ. ಲೇಔಟ್, ಲಕ್ಷ್ಮೀನಾರಾಯಣ ದೇವಸ್ಥಾನ ರಸ್ತೆ ಹಾಗೂ ಮಂಜುನಾಥ ಲೇಔಟ್‌ನಲ್ಲಿ ಮಿಸ್ಸಿಂಗ್ ಬಿಟ್ ಯುಜಿಡಿ ಪೈಪ್‌ಲೈನ್ ಹಾಗೂ ಕಾವೇರಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳಿಗೆ ಚಾಲನೆ ದೊರೆಯಿತು.

ಕೊಡಿಗೇಹಳ್ಳಿ ರಸ್ತೆಯ ಆಲ್ಫಾ ಲೇಔಟ್‌ನಲ್ಲಿ ಕಾವೇರಿ ಕುಡಿಯುವ ನೀರಿನ ಸರಬರಾಜಿಗೆ ಚಾಲನೆ

ಎಇಸಿಎಸ್ ಲೇಔಟ್ ಇ ಬ್ಲಾಕ್ ಮೈದಾನದಲ್ಲಿ ಮಿಸ್ಸಿಂಗ್ ಬಿಟ್ ಯುಜಿಡಿ ಪೈಪ್‌ಲೈನ್ ಹಾಗೂ ಕಾವೇರಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ

ಚಿನ್ನಪ್ಪನಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಚಿನ್ನಪ್ಪನಹಳ್ಳಿ ಗ್ರಾಮದ 6ನೇ ಮುಖ್ಯರಸ್ತೆಯಿಂದ 10ನೇ ಮುಖ್ಯರಸ್ತೆಯವರೆಗೆ ಯುಜಿಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ಬಸವಣ್ಣನಗರ ಗ್ರಾಮದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿಗದಿತ ಸಮಯಕ್ಕೆ ಸರಿಯಾಗಿ ಸುಸಜ್ಜಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುಬೇಕು ಎಂದರು.

ನಗರ ಮಂಡಲದ ಅಧ್ಯಕ್ಷ ಎನ್. ಆರ್. ಶ್ರೀಧರ್ ರೆಡ್ಡಿ, ಗ್ರಾಮಾಂತರ ಅಧ್ಯಕ್ಷ ಹೆಚ್.ಎಸ್.ಪಿಳ್ಳಪ್ಪ, ಭೂ ನ್ಯಾಯಮಂಡಲಿ ಮಾಜಿ ಸದಸ್ಯ ಕೆ.ಎನ್.ಬಾಬುರೆಡ್ಡಿ, ಕೊಡತಿ ವಾಡ್9ಅಧ್ಯಕ್ಷ ಕೆ.ವಿ.ಸತೀಶ್ ರೆಡ್ಡಿ, ಗ್ರಾಮಪಂಚಾಯಿತಿ ಸದಸ್ಯರಾದ ನವೀನ್, ಸೋಮಶೇಖರ್ ರೆಡ್ಡಿ ಮುಖಂಡರಾದ ಮಾರಪ್ಪ, ಚಂದನ್ ಸೇರಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net