

ಬೆಂಗಳೂರು: ನಗರದ ಬಸವನಪುರ ಮುಖ್ಯ ರಸ್ತೆಯ 10ನೇ ಕ್ರಾಸ್ ಕೊನೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಿಟೈನಿಂಗ್ ವಾಲ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ ಹೈಕೋರ್ಟ್ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ‘ಜನಶಕ್ತಿ ವೆಲ್ಫೇರ್ ಲೇ ಔಟ್ ಅಸೋಸಿಯೇಷನ್ ’ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಮಳೆಗಾಲದಲ್ಲಿ ಒಳ ಚರಂಡಿ ವ್ಯವಸ್ಥೆ ಸುಧಾರಿಸಲು 2022ರಲ್ಲಿ ಸರ್ಕಾರ ಹೊರಡಿಸಿದ ಆದೇಶದ ಅನುಸಾರ ಬಿಬಿಎಂಪಿ ರಿಟೈನಿಂಗ್ ವಾಲ್ (ತಡೆ ಗೋಡೆ) ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ. ಇದರ ಅನ್ವಯ ಬಸವನಪುರ ಮುಖ್ಯ ರಸ್ತೆಯ 10 ನೇ ಕ್ರಾಸ್ ಕೊನೆಯಲ್ಲಿ 3 ಅಡಿ ಎತ್ತರದ ತಡೆಗೊಡೆ ನಿರ್ಮಾಣ ಹಂತದಲ್ಲಿದ್ದು ಕಾಮಗಾರಿ ವಿಳಂಬ ಪ್ರವೃತ್ತಿಯಲ್ಲಿ ಸಾಗುತ್ತಿದೆ. ಮಳೆ ತೀವ್ರತೆ ಹೆಚ್ಚಾದಂತೆ ಕೊಳಚೆ ನೀರು ಸ್ಥಳೀಯ ಪ್ರದೇಶಕ್ಕೂ ಹರಿದುಬರುತ್ತಿದ್ದು, ಜನರು ಅನೇಕ ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುವುದನ್ನು ಪೀಠದ ಗಮನಕ್ಕೆ ತಂದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ನಿಜಾಂಶವಿದ್ದರೆ ಇದೊಂದು ಗಂಭೀರ ವಿಚಾರವೆಂದು ಅಭಿಪ್ರಾಯಪಟ್ಟಿದೆ. ಜತೆಗೆ ಸರ್ಕಾರಿ ಪರ ವಕೀಲರು ಕಾಲಾವಕಾಶಕ್ಕಾಗಿ ಮನವಿ ಮಾಡಿದನ್ನು ಪರಿಗಣಿಸಿದ ಬಿಬಿಎಂಪಿ ಗೆ ನೋಟಿಸ್ ಜಾರಿಗೊಳಿಸಿದೆ.ಹಾಗೂ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ