

ಬೆಂಗಳೂರು: ನಟ ಧ್ರುವ ಸರ್ಜಾ(Dhruva Sarja) ವಿರುದ್ಧ ಇಲ್ಲಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧ್ರುವ ಮಾತ್ರವಲ್ಲದೆ ಅವರ ಮ್ಯಾನೆಜರ್ ಮತ್ತು ಕಾರು ಚಾಲಕನ ವಿರುದ್ಧ ಕೂಡ ಗುರುವಾರ ದೂರು ದಾಖಲಾಗಿದೆ.
ಮನೆಯ ನರೆಹೊರೆಯವರಾದ ಮನೋಜ್ ಎಂಬುವರು ನಟನ ವಿರುದ್ಧ ದೂರು ನೀಡಿದ್ದು, ಈ ಮೂವರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ದೂರು ನೀಡುರುವ ಮನೋಜ್, ನಟರ ಮನೆಯ ನೆರೆಯವರಾಗಿದ್ದು, ಧ್ರುವ ಮನೆಗೆ ದಿನನಿತ್ಯ ಭೇಟಿ ನೀಡುವ ಅಭಿಮಾನಿಗಳಿಂದ ಸಮಸ್ಯೆ ಉಂಟಾಗುತ್ತಿದೆ. ಧ್ರುವ ಫ್ಯಾನ್ಸ್ಗೆ ಬೇಸತ್ತ ಮನೋಜ್ ಇದೀಗ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ.
ಧ್ರುವ ಸರ್ಜಾ ಅವರ ಮನೆಗೆ ಬರುವ ಫ್ಯಾನ್ಸ್ ರಸ್ತೆಯಲ್ಲಿ, ಮನೆಯ ಮುಂದೆ ಅಡ್ಡಾದಿಡ್ಡಿಯಾಗಿ ಗಾಡಿಗಳನ್ನು ಪಾರ್ಕಿಂಗ್ ಮಾಡ್ತಾರೆ. ಕೂಗಾಡುತ್ತಾರೆ, ಕಿರುಚಾಡುತ್ತಾರೆ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಿದೆ ಎಂದು ಮನೋಜ್ ದೂರಿನಲ್ಲಿ ಆರೋಪಿಸಿದ್ದಾರೆ. ಹೀಗಾಗಿ, ನಟ ಧೃವ, ಮ್ಯಾನೇಜರ್ ಮತ್ತು ಚಾಲಕನ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬೇಕು ಎಂದು ಅಧಿಕಾರಿಗಳ ಬಳಿ ಮನೋಜ್ ಮನವಿ ಮಾಡಿದ್ದಾರೆ. ಆದರೆ, ಎಫ್ಐಆರ್ ದಾಖಲು ಮಾಡಿಲ್ಲ. ಎನ್ಸಿಆರ್ ಮಾತ್ರ ದಾಖಲಾಗಿದೆ.