

ಬೆಂಗಳೂರು: ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ದೂರು ದಾಖಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ವರುಣ್ ಆರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆತನ ಮಾಜಿ ಪ್ರೇಯಸಿ ವರ್ಷಾ ಕಾವೇರಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ವರುಣ್ ಆರಾಧ್ಯ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದೆ. ಜತೆಯಲ್ಲಿದ್ದಾಗ ತೆಗೆದುಕೊಂಡ ವೈಯಕ್ತಿಕ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬೆದರಿಕೆ ಹಾಕುತ್ತಿರುವುದಾಗಿ ವರ್ಷಾ ಕಾವೇರಿ ಆರೋಪಿಸಿದ್ದಾರೆ. ವಾಟ್ಸ್ಆ್ಯಪ್ಗೆ ಖಾಸಗಿ ಪೋಟೊ ಕಳುಹಿಸಿ ಅವಾಚ್ಯ ಪದಗಳಿಂದ ನಿಂದಿಸಿದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವರುಣ್ ಆರಾಧ್ಯ ಅವರು ಸೀರಿಯಲ್ಗೆ ಎಂಟ್ರಿ ಕೊಡುವ ಮುನ್ನವೆ ಇವರಿಬ್ಬರ ಬ್ರೇಕಪ್ ಆಗಿತ್ತು. ಇನ್ಸ್ಟಾಗ್ರಾಮ್ಸೇರಿದಂತೆ ಎಲ್ಲಾ ಫ್ಲಾಟ್ಫಾರ್ಮ್ನಲ್ಲಿ ಈ ಜೋಡಿ ಫೇಮಸ್ ಆಗಿದ್ದರು. 4 ವರ್ಷದ ಹಿಂದೆ ಇನ್ಸ್ಟಾಗ್ರಾಮ್ನಲ್ಲಾದ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಆದ್ರೆ ನಟ ವರುಣ್ ಆರಾಧ್ಯ ವರ್ಷಾ ಕಾವೇರಿ ಜತೆ ಪ್ರೀತಿಯಲ್ಲಿರುವಾಗಲೇ ಬೇರೊಂದು ಹುಡುಗಿ ಜತೆ ಅಫೇರ್ ಕೂಡ ಇಟ್ಟುಕೊಂಡಿದ್ದಾರೆ. ಫೋನ್‌ನಲ್ಲಿ ಮತ್ತೊಂದು ಯುವತಿ ಜತೆಗಿದ್ದ ಖಾಸಗಿ ಫೋಟೋಗಳು ಪತ್ತೆಯಾದ ಬಳಿಕ, ಅದರ ಬಗ್ಗೆ ಪ್ರಶ್ನೆ ಮಾಡಿ ಬ್ರೇಕಪ್ಗೆ ಮುಂದಾಗಿದ್ದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಟ ವರುಣ್ ಆರಾಧ್ಯ, ನನ್ನ ವಿಚಾರ ಬಾಯ್ಬಿಟ್ಟರೆ ಖಾಸಗಿ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹಾಗೂ ಬೇರಯವರನ್ನ ಮದುವೆಯಾದ್ರೆ ಅವನನ್ನ ಸಾಯುಸಿ ನಿನ್ನನ್ನು ಸಾಯಿಸುತ್ತೇನೆಂದು ವರುಣ್ ಬೆದರಿಸುತ್ತಿದ್ದಾರೆ ಹಾಕುತ್ತಿದ್ದಾರೆ ಎಂದು ವರ್ಷಾ ಕಾವೇರಿ ಆರೋಪ ಮಾಡಿದ್ದಾರೆ ಎನ್ನಲಾಗಿದೆ.