ರಾಣಿ ಸಂಯುಕ್ತ ಹೇಳಿಕೆ ಅವಹೇಳನ ಮಾಡಿದವನ ವಿರುದ್ಧ ದೂರು

fir-crpc-154-1
Published on

ಸಿದ್ಧಾರ್ಥ ಸಿಂಗ್ ಆಪ್ತ ಆಂಥೋನಿ ದಾಸ್ ವಿರುದ್ಧ ಎಫ್ ಐಆರ್

ಹೊಸಪೇಟೆ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿಯನ್ನು ತಿರುಚಿ ಕಾಂಗ್ರೆಸ್ ನಾಯಕಿಗೆ ಅಪಮಾನ ಮಾಡಿದ ಆರೋಪದಡಿ ವಿಜಯನಗರ ಬಿಜೆಪಿ ಪರಾಜಿತ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಆಪ್ತನ ವಿರುದ್ಧ ದೂರು ದಾಖಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ‌ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಅವರ ಕ್ಯಾಮರಾ ಮ್ಯಾನ್ ಹಾಗೂ ಆಪ್ತನಾಗಿ ಗುರುತಿಸಿಕೊಂಡಿದ್ದ ಟಿಬಿ ಡ್ಯಾಂ ವಂಕೈ ಕ್ಯಾಂಪ್ ನಿವಾಸಿ ಆಂಥೋನಿದಾಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಸ್ಥಳೀಯ ಕಾಂಗ್ರೆಸ್ ನಾಯಕಿ ರಾಣಿ ಸಂಯುಕ್ತ ಇತ್ತೀಚೆಗೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದರು‌‌. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ‌ ಮತ್ತು ಹೊಸಪೇಟೆ ಜನರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂಬ ಹೇಳಿಕೆಯ ವಿಡಿಯೋ ತುಣುಕಿನೊಂದಿಗೆ ಹೊಸಪೇಟೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಎಂಬ ಬ್ರೇಕಿಂಗ್ ಸೇರಿಸಿ ಅವಹೇಳನ‌ ಮಾಡಿದ್ದಾರೆ. ಜತೆಗೆ ರಾಜಕೀಯ ದ್ವೇಷವನ್ನು ಉಂಟು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಕಾಂಗ್ರೆಸ್ ಮುಖಂಡ ವಿನಾಯಕ‌ ಶೆಟ್ಟರ ನೀಡಿದ ದೂರಿನ ಮೇರೆಗೆ ತುಂಗಭದ್ರ ಡ್ಯಾಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net