ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೂ ಕೈನಲ್ಲಿ ಪೈಪೋಟಿ

KMF
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ(ಕೆಎಂಎ್) ಅಧ್ಯಕ್ಷರ ಸ್ಥಾನದ ವಿಚಾರದಲ್ಲೂ ಪೈಪೂಟಿ ನಡೆದಿದೆ.

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಚಾಲ್ತಿಗೆ ಬಂದಿರುವ ಕಾರಣ ಪರೋಕ್ಷವಾಗಿ ಡಿ.ಕೆ. ಸೋದರರ ವಿರುದ್ಧ ಮಾಲೂರು ಶಾಸಕ ಕೆ.ಎನ್. ನಂಜೇಗೌಡ ಸಿಡಿದಿದ್ದಾರೆ. ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ನಂಜೇಗೌಡ ಮಾತನಾಡಿದರು.

ಕಳೆದ ಬಾರಿ ಕೆಎಂಎ್ ಅಧ್ಯಕ್ಷ ಸ್ಥಾನ ಕೇಳಿದಾಗ ಭೀಮಾ ನಾಯ್ಕಗೆ ಅವಕಾಶ ಮಾಡಿಕೊಟ್ಟ ಸಿಎಂ ಸಿದ್ದರಾಮಯ್ಯ, ಮುಂದಿನ ಬಾರಿಗೆ ಅವಕಾಶ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸೋತವರಿಗೆ ಯಾಕೇ ಅವಕಾಶ ಕೊಡಬೇಕು. ಗೆದ್ದವರಿಗೆ ಕೆಎಂಎ್ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಇದೀಗ ನನಗೆ ಸಿಗಬೇಕಾದ ಅವಕಾಶವನ್ನು ಅವರ ಸಹೋದರ ಡಿ.ಕೆ. ಸುರೇಶ್‌ಗೆ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಡಿ.ಕೆ ಸುರೇಶ್‌ಗೆ ಡಿಕೆ ಬ್ರದರ್ಸ್ ಎಂಬ ಟ್ಯಾಗ್‌ಲೈನ್ ಇದೆ. ಅದನ್ನು ಇಟ್ಟುಕೊಂಡು ಅವರು ಯಾವ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ಮಂತ್ರಿ ಸ್ಥಾನಕ್ಕೂ ಹೋಗಬಹುದು. ನಾವು ಸಣ್ಣವರು, ಅವರಷ್ಟು ನಾವು ಹೋಗಲು ಆಗಲ್ಲ ಎಂದು ನಂಜೇಗೌಡ, ಪರೋಕ್ಷವಾಗಿ ಡಿ.ಕೆ. ಸಹೋದರರ ವಿರುದ್ಧ ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net