

ಚಿತ್ರದುರ್ಗ: ಸಣ್ಣ,ದೊಡ್ಡ ಎಂದು ತಾರತಮ್ಯ ಮಾಡದೆ ಬೆಳೆ ಹಾನಿಯಿಂದಾಗಿ ಕಂಗಾಲಾಗಿರುವ ಎಲ್ಲ ರೈತರಿಗೆ ಸಮಾನವಾಗಿ ಪರಿಹಾರ ವಿತರಿಸ ಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರೈತ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ,ರಾಜ್ಯಾದ್ಯಂತ ವಿಪರೀತ ಮಳೆಯಾಗಿರು ವುದರಿಂದ ಎಲ್ಲ ಬಗೆ ಯ ಬೆಳೆಗಳು ನಾಶವಾಗಿವೆ. ಸಣ್ಣ ಹಿಡುವಳಿದಾರ,ದೊಡ್ಡ ಹಿಡುವಳಿದಾರ ಎಂದೆಣಿಸದೆ ಎಕರೆಯೊಂದಕ್ಕೆ 25 ಸಾವಿರ ರೂ.ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಹಣ ಪಾವತಿಸಿರುವ ರೈತರ ಖಾತೆಗಳಿಗೂ ಬೆಳೆವಿಮೆ ಜಮೆ ಆಗಿಲ್ಲ.
ರೈತರನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆಂದು ಸರ್ಕಾರವನ್ನು ಎಚ್ಚರಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ,ಸಿದ್ದರಾಮಪ್ಪ ರಂಜಿಣಿಗಿ,ಬಿ.ಸಿ.ಪಾಟೀಲ್, ನರ ಸಿಂಹಪ್ಪ, ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ,ಬಸ್ತಿಹಳ್ಳಿ ನಾರಪ್ಪ,ಎಂ.ಸಿದ್ದಪ್ಪ ಹಳಿಯೂರು,ಬಸವಣ್ಣಪ್ಪ.
ನೀಲಪ್ಪ,ವೀರಣ್ಣ, ಷಣ್ಮು ಖಪ್ಪ,ಗಿರೀಶ್‌ರೆಡ್ಡಿ,ರವಿ,ನಿಂಗಮ್ಮ,ನಿರಂಜನಮೂರ್ತಿ, ಬಸವರಾಜಪ್ಪ,ಪರಮಶಿವಣ್ಣ,ಸಿ.ಕುಬೇಂದ್ರನಾಯ್ಕ, ಬಿ.ಗಜೇಂದ್ರ,ಜಿ.ಜ್ಯೋತಿ ಜಮ್ಮೇನಹಳ್ಳಿ,ಮೈಸೂರಿನ ನಿಂಗಮ್ಮ,ರವಿ,ರವಿಸಿದ್ದೇಗೌಡ ಮತ್ತಿತರರು ಇದ್ದರು.