VIDEO| ಉದ್ಯೋಗಿಗಳು ಹೊರ ಹೋಗದಂತೆ ಲಾಕ್​ ಮಾಡಿದ ಕಂಪನಿ; ನಂತರ ಕ್ಷಮೆ ಕೇಳಿದ್ಯಾಕೆ?

Coding Ninja
Published on

ಗುರುಗ್ರಾಮ: ಕೆಲಸದ ವೇಳೆ ಅನುಮತಿಯಿಲ್ಲದೆ ಆಫೀಸ್​ನಿಂದ ಸಿಬ್ಬಂದಿ ಹೊರಹೋಗದಂತೆ ವಾಚ್​ಮ್ಯಾನ್​ ಒಬ್ಬರು ಕಂಪನಿಯ ಬಾಗಿಲಿಗೆ ಬೀಗ ಹಾಕುತ್ತಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿರುವ ಕೋಡಿಂಗ್​ ನಿನ್​ಜಾಸ್​ನಲ್ಲಿ ನಡೆದಿದೆ.

ಉದ್ಯಮಿ ರವಿ ಹಂಡಾ ಎಂಬುವವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು ಇಂಡಿಯನ್​ ಎಡ್​ಟೆಕ್​​ ಸಂಸ್ಥಾಪಕರು ಇದೀಗ ಉದ್ಯೋಗಿಗಳನ್ನು ಬೀಗ ಹಾಕಿ ಕೂಡಿ ಹಾಕುತ್ತಿದ್ದಾರೆ. ಈ ರೀತಿ ಮಾಡಲು ಯಾರು ಮುಂದೆ ಬರಬೇಡಿ ಎಂದು ಟ್ವೀಟ್​ ಮಾಡಿದ್ಧಾರೆ.

ವಿಡಿಯೋ ವೈರಲ್​

ವೈರಲ್​ ಆಗಿರುವ ವಿಡಿಯೋದಲ್ಲಿ ವಾಚ್​ಮ್ಯಾನ್​ ಓರ್ವ ಕಂಪನಿಯ ಮ್ಯಾನೇಜರ್​ ತನ್ನ ಒಪ್ಪಿಗೆಯಿಲ್ಲದೆ ಯಾರನ್ನು ಹೊರಬಿಡದಂತೆ ಸೂಚಿಸಲಾಗಿದೆ ಎಂದು ಹೇಳುತ್ತಾ ಬಾಗಿಲಿಗೆ ಬೀಗ ಹಾಕುತ್ತಿರುವುದು ಕಂಡು ಬರುತ್ತದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಕೋಡಿಂಗ್​ ನಿನ್​ಜಾಸ್​ ಕಂಪನಿ ಸ್ಪಷ್ಟನೆ ನೀಡಿದ್ದು ಇತ್ತೀಚಿಗೆ ನಮ್ಮ ಕಂಪನಿಯಲ್ಲಿ ನೌಕರ ಓರ್ವ ಮಾಡಿದ ಕೆಲಸದಿಂದಾಗಿ ನಾವು ಈ ರೀತಿಯ ಕ್ರಮ ಜರುಗಿಸಬೇಕಾಯಿತು. ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಾವು ತಪ್ಪನ್ನು ಸರಿಪಡಿಸಿದ್ದೇವೆ ಅನಾನೂಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ.

ಘಟನೆ ಸಂಬಂಧ ಕಂಪನಿಯ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಸದಸ್ಯರು ಉದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋಡಿಂಗ್​ ನಿನ್​ಜಾಸ್​ ಕಂಪನಿ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದೆ.

Coding Ninjas Tweet
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net