ಮಂಗಳೂರಿನಲ್ಲಿ ಕೋಮು ಸೌಹಾರ್ದತೆಗೆ ಆದ್ಯತೆ: ಸಿಎಂ ಸಿದ್ದರಾಮಯ್ಯ|No one is above the law

IMG-20250529-WA0015
Published on

ಬೆಂಗಳೂರು: ಮಂಗಳೂರಿನಲ್ಲಿ ಕೋಮು ಸೌಹಾರ್ದತೆ ನೆಲೆಸಬೇಕು. ಆ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಸರ್ಕಾರ ಕ್ರಮವಹಿಸಲಿದೆ. ಹಿಂದುಗಳು ಹಾಗೂ ಮುಸ್ಲಿಮರು ಪರಸ್ಪರ ದ್ವೇಷ ಭಾವನೆ ಬೆಳೆಸಿಕೊಳ್ಳುವುದು ಸರಿಯಲ್ಲ. ಕೋಮು ವಿರೋಧಿ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸದಾಶಿವನಗರದಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನಿವಾಸಕ್ಕೆ ಗುರುವಾರ ಆಗಮಿಸಿ ಅವರೊಂದಿಗೆ ಉಪಾಹಾರ ಸೇವಿಸಿದ ನಂತರ ಸುದ್ದಿಗಾರರಿಗೆ ಸಿಎಂ ಪ್ರತಿಕ್ರಿಯಿಸಿ, ಮಂಗಳೂರಿನಲ್ಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುರೀತ್ಯ ಕ್ರಮವಾಗಲಿದೆ. ಎಷ್ಟೇ ದೊಡ್ಡವರಿದ್ದರೂ ಕಠಿಣ ಕಾನೂನು ಕ್ರಮವಾಗಲಿದೆ. ಕಾನೂನು ದೊಡ್ಡದೇ ಹೊರತು, ಅದಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಸ್ಪಷ್ಟಪಡಿಸಿದರು.

ಬಿ.ಕೆ.ಹರಿಪ್ರಸಾದ್ ಮನೆಗೆ ಬರುತ್ತೇನೆಂದು ಹೇಳಿದ್ದೆ. ಉಪಾಹಾರಕ್ಕೆ ಆಹ್ವಾನಿಸಿದ್ದರು, ಬಂದಿದ್ದೇನೆ. ಈ ವೇಳೆ ರಾಜಕೀಯವಲ್ಲ ಸಾಮಾನ್ಯ ವಿಷಯಗಳು ಚರ್ಚೆಯಾಗಿವೆ. ಮಂಗಳೂರು ಘಟನೆ, ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆ ಬಗ್ಗೆ ಚರ್ಚೆಯಾಯಿತು. ಮಂಗಳೂರಿಗೆ ಹೋಗಿ ಬರುವಂತೆ ಬಿ.ಕೆ.ಹರಿಪ್ರಸಾದ್ ಗೆ ಹೇಳಿರುವೆ ಎಂದು ಸಿಎಂ ಸಿದ್ದರಾಮಯ್ಯ ಉತ್ತರಿಸಿದರು

ಎರಡು ದಿನ ಮಳೆ ಸಭೆ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆ, ಹಾನಿ, ಕೈಗೊಂಡ ಕ್ರಮಗಳ ಬಗ್ಗೆ ಶುಕ್ರವಾರ ಹಾಗೂ ಶನಿವಾರ ಸಭೆಗಳು ನಡೆಯಲಿವೆ. ಮುಖ್ಯ ಕಾರ್ಯದರ್ಶಿ, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಮತ್ತಿತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಎರಡು ದಿನಗಳ ಸಭೆಯಲ್ಲಿ ಸಚಿವರು ಹಾಜರಿರಲಿದ್ದಾರೆ. ವಸ್ತುಸ್ಥಿತಿ ಪರಾಮರ್ಶಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net