Commonwealth Games: ಭಾರತದ 39 ಪದಕ ವಿಜೇತರ ವಿವರ ಹೀಗಿದೆ...

Commonwealth Games: ಭಾರತದ 39 ಪದಕ ವಿಜೇತರ ವಿವರ ಹೀಗಿದೆ...
Commonwealth Games: ಭಾರತದ 39 ಪದಕ ವಿಜೇತರ ವಿವರ ಹೀಗಿದೆ...
Published on
ಗ್ಲಾಸ್ಗೋ: ಭಾರತ ತಂಡ ಗ್ಲಾಸ್ಗೋ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ (Commonwealth Games) ತನ್ನ ಪ್ರಾಬಲ್ಯದ ಪ್ರಮುಖ ಕ್ರೀಡೆಗಳ ಗೈರಿನಲ್ಲೂ ಭರ್ಜರಿ ಪದಕ ಬೇಟೆಯಾಡಿದೆ. ಭಾನುವಾರ ವರ್ಣರಂಜಿತ ಸಮಾರಂಭದೊಂದಿಗೆ ಮುಕ್ತಾಯಗೊಂಡ 23ನೇ ಆವೃತ್ತಿಯಲ್ಲಿ ಭಾರತ ತಂಡ 13 ಚಿನ್ನ, 17 ಬೆಳ್ಳಿ, 9 ಕಂಚಿನ ಸಹಿತ ಒಟ್ಟು 39 ಪದಕಗಳನ್ನು ಒಲಿಸಿಕೊಳ್ಳುವ ಮೂಲಕ ಪದಕಪಟ್ಟಿಯಲ್ಲಿ ಆತಿಥೇಯ ಸ್ಕಾಟ್ಲೆಂಡ್​ (13 ಚಿನ್ನ, 9 ಬೆಳ್ಳಿ, 17 ಕಂಚು, ಒಟ್ಟು 39) ತಂಡವನ್ನು ಹಿಂದಿಕ್ಕಿ 4ನೇ ಸ್ಥಾನ ಗಳಿಸಿತು. ಶೂಟಿಂಗ್​, ಬ್ಯಾಡ್ಮಿಂಟನ್​, ಕುಸ್ತಿ, ಟೇಬಲ್​ ಟೆನಿಸ್​, ಹಾಕಿ, ಟಿ20 ಕ್ರಿಕೆಟ್​ ಮುಂತಾದ ತನ್ನ ನೆಚ್ಚಿನ ಕ್ರೀಡೆಗಳ ಗೈರಿನಲ್ಲೂ ಭಾರತ ತಂಡ ಬಾಕ್ಸಿಂಗ್​, ಅಥ್ಲೆಟಿಕ್ಸ್​, ವೇಯ್ಟ್​ಲಿಫ್ಟಿಂಗ್​, ಜುಡೋದಲ್ಲಿ ತನ್ನ ನಿರೀೆಗೂ ಮೀರಿದ ಭರ್ಜರಿ ನಿರ್ವಹಣೆ ಪ್ರದರ್ಶಿಸಿತು. ಈ ಮೂಲಕ 2030ರಲ್ಲಿ ತವರಿನಲ್ಲೇ ನಡೆಯಲಿರುವ ಕಾಮನ್ವೆಲ್ತ್​ ಗೇಮ್ಸ್​ಗೆ ಭಾರತ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.

ಪ್ರಮುಖ ಕ್ರೀಡೆಗಳ ಗೈರಿನಲ್ಲೂ ಪದಕ ಪಟ್ಟಿಯಲ್ಲಿ ಅಗ್ರ 5ರೊಳಗೆ ಸ್ಥಾನ ಸಂಪಾದಿಸುವ ತನ್ನ ಗುರಿ ಈಡೇರಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಯಿತು. ಭಾರತ ಕಳೆದ 2022ರ ಆವೃತ್ತಿಯ ಪದಕಪಟ್ಟಿಯಲ್ಲೂ 4ನೇ ಸ್ಥಾನ ಗಳಿಸಿತ್ತು. ಒಟ್ಟು ಚಿನ್ನ ಮತ್ತು ಪದಕ ಗಳಿಕೆಯ ಲೆಕ್ಕದಲ್ಲಿ ಇದು 1998ರ ಆವೃತ್ತಿಯ ಬಳಿಕ ಭಾರತದ ಕನಿಷ್ಠ ಪದಕ ಗಳಿಕೆಯಾಗಿದೆ. ಆದರೆ ಕಳೆದ 6 ಆವೃತ್ತಿಗಳಿಂದ ಭಾರತಕ್ಕೆ ಹೆಚ್ಚು ಪದಕ ಗೆದ್ದುಕೊಡುತ್ತಿದ್ದ ಶೂಟಿಂಗ್​, ಕುಸ್ತಿ, ಬ್ಯಾಡ್ಮಿಂಟನ್​, ಟೇಬಲ್​ ಟೆನಿಸ್​ ಕ್ರೀಡೆಗಳ ಗೈರಿನಿಂದಾಗಿ ಇದು ಹಿನ್ನಡೆಯಲ್ಲ, ಬದಲಾಗಿ ಉತ್ತಮ ನಿರ್ವಹಣೆಯೇ ಆಗಿದೆ.

ಆಯೋಜನೆ ವೆಚ್ಚ ತಗ್ಗಿಸುವ ದೃಷ್ಟಿಯಿಂದ ಈ ಬಾರಿ ಕೆಲ ಕ್ರೀಡೆಗಳನ್ನು ಕೈಬಿಡಲಾಗಿತ್ತು. ಆದರೆ 2030ರಲ್ಲಿ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆಯಲಿರುವ ಗೇಮ್ಸ್​ನಲ್ಲಿ ಮತ್ತೆ 17 ಕ್ರೀಡಾ ವಿಭಾಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಪರ್ಧೆ ನಡೆಯಲಿದೆ.

ಭಾರತದ ಪದಕ ವಿಜೇತರು

ಚಿನ್ನ: 13

*ಮೀರಾಬಾಯಿ ಚಾನು (ವೇಯ್ಟ್​ಲಿಫ್ಟಿಂಗ್​)
*ಶರ್ಮಿಳಾ ಧನಕರ್​ (ಪ್ಯಾರಾ ಶಾಟ್​ಪುಟ್​)
*ದಿಲೀಪ್​ ಗವಿತ್​ (ಪ್ಯಾರಾ 100 ಮೀ.)
*ಸೋಮನ್​ ರಾಣಾ (ಪ್ಯಾರಾ ಶಾಟ್​ಪುಟ್​)
*ಅಸ್ಮಿತಾ ಡೇ (ಜುಡೋ)
*ಹರ್ಷ್​ ಸಿಂಗ್​ (ಜುಡೋ)
*ಪ್ರೀತಿ ಪವಾರ್​ (ಬಾಕ್ಸಿಂಗ್​)
*ಜಾಸ್ಮಿನ್​ ಲಂಬೋರಿಯಾ (ಬಾಕ್ಸಿಂಗ್​)
*ಸಾ ಚೌಧರಿ (ಬಾಕ್ಸಿಂಗ್​)
*ಪ್ರಿಯಾ ಘಂಘಾಸ್​ (ಬಾಕ್ಸಿಂಗ್​)
*ಅರುಂಧತಿ ಚೌಧರಿ (ಬಾಕ್ಸಿಂಗ್​)
*ಸಚಿನ್​ ಸಿವಾಚ್​ (ಬಾಕ್ಸಿಂಗ್​)
*ಅಂಕುಶ್​ ಪಾಂಲ್​ (ಬಾಕ್ಸಿಂಗ್​)
ಬೆಳ್ಳಿ: 17
*ರಿಷಿಕಾಂತ್​ ಸಿಂಗ್​ (ವೇಯ್ಟ್​ಲಿಫ್ಟಿಂಗ್​)
*ಜ್ಞಾನೇಶ್ವರಿ ಯಾದವ್​ (ವೇಯ್ಟ್​ಲಿಫ್ಟಿಂಗ್​)
*ರಾಜ ಮುತ್ತುಪಾಂಡಿ (ವೇಯ್ಟ್​ಲಿಫ್ಟಿಂಗ್​)
*ಅಜಯ್​ ಬಾಬು ವಲ್ಲುರಿ (ವೇಯ್ಟ್​ಲಿಫ್ಟಿಂಗ್​)
*ಹರ್ಜಿಂದರ್​ ಕೌರ್​ (ವೇಯ್ಟ್​ಲಿಫ್ಟಿಂಗ್​)
*ಲವ್​ಪ್ರೀತ್​ ಸಿಂಗ್​ (ವೇಯ್ಟ್​ಲಿಫ್ಟಿಂಗ್​)
*ನೀರಜ್​ ಚೋಪ್ರಾ (ಜಾವೆಲಿನ್​ ಥ್ರೋ)
*ಸರ್ವೇಶ್​ ಕುಶಾರೆ (ಹೈಜಂಪ್​)
*ಗುಲ್​ವೀರ್​ ಸಿಂಗ್​ (10 ಸಾವಿರ ಮೀ.)
*ಮುರಳಿ ಶ್ರೀಶಂಕರ್​ (ಲಾಂಗ್​ಜಂಪ್​)
*ಮೊಹಮ್ಮದ್​ ಬಸಿಲ್​ (ಪ್ಯಾರಾ 100 ಮೀ.)
*ಪ್ರವಿಣ್​ ಚಿತ್ರವೇಲ್​ (ಟ್ರಿಪಲ್​ ಜಂಪ್​)
*ಶುಭಂ ಜುಯಲ್​ (ಪ್ಯಾರಾ ಶಾಟ್​ಪುಟ್​)
*ಯಾಮಿನಿ ಮೌರ್ಯ (ಜುಡೋ)
*ಜಾದುಮಣಿ ಸಿಂಗ್​ (ಬಾಕ್ಸಿಂಗ್​)
*ಲವ್ಲಿನಾ ಬೋಗೋರ್ಹೈನ್​ (ಬಾಕ್ಸಿಂಗ್​)
*ನರೇಂದರ್​ ಬೆರ್ವಾಲ್​ (ಬಾಕ್ಸಿಂಗ್​)
ಕಂಚು: 9
*ಝಂಡು ಕುಮಾರ್​ (ಪವರ್​ಲಿಫ್ಟಿಂಗ್​)
*ಬಿಂದ್ಯಾರಾಣಿ ದೇವಿ (ವೇಯ್ಟ್​ಲಿಫ್ಟಿಂಗ್​)
*ಶಿಲಾ ಕೆ.ಎಸ್​. (ಪ್ಯಾರಾ ಶಾಟ್​ಪುಟ್​)
*ಸೀಮಾ ಕಲಿರಾಮ್ನಾ (ಡಿಸ್ಕಸ್​ ಥ್ರೋ)
*ತೇಜಸ್ವಿನ್​ ಶಂಕರ್​ (ಡೆಕಾಥ್ಲಾನ್​)
*ಯಶ್​ವೀರ್​ ಸಿಂಗ್​ (ಜಾವೆಲಿನ್​ ಥ್ರೋ)
*ಸೆಲ್ವ ಪ್ರಭು (ಟ್ರಿಪಲ್​ ಜಂಪ್​)
*ಗುಲ್​ವೀರ್​ ಸಿಂಗ್​ (5 ಸಾವಿರ ಮೀ)
*ಉನ್ನತಿ ಶರ್ಮ (ಜುಡೋ)

ಕೊನೇ 5 ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net