ಎಳ್ಳಮಾವಾಸ್ಯೆ ಜಾತ್ರೆಗೆ ಸಮಿತಿ ರಚನೆ

rameshwara
ತೀರ್ಥಹಳ್ಳಿಯಲ್ಲಿರುವ ಶ್ರೀ ರಾಮೇಶ್ವರ ದೇವಾಲಯ
Published on

ತೀರ್ಥಹಳ್ಳಿ: ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವ ಸಮಿತಿಯಿಂದ ಡಿ.30ರಿಂದ ಮೂರು ದಿನಗಳ ಎಳ್ಳಮಾವಾಸ್ಯೆ ಜಾತ್ರೆ ನಡೆಯಲಿದೆ. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.

ಸಮಿತಿಗೆ ಗೌರವಾಧ್ಯಕ್ಷರಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಎಚ್. ಪಾಂಡುರಂಗಪ್ಪ, ಸಂಚಾಲಕರಾಗಿ ರಾಘವೇಂದ್ರ, ಟಿ.ಎಲ್.ಸುರೇಶ್, ಉಪಾಧ್ಯಕ್ಷರಾಗಿ ರಹಮತ್ ಉಲ್ಲಾ ಅಸಾದಿ, ಕೆ.ನಾಗರಾಜ್ ಶೆಟ್ಟಿ, ಸಿರಿಬೈಲ್ ಧರ್ಮೇಶ್, ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಹೆದ್ದೂರು ನವೀನ್, ವಿಶ್ವನಾಥ ಶೆಟ್ಟಿ, ಡಿ.ಎಸ್.ಶಶಿಧರ ಹಂದೆ, ಕುಣುಜೆ ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾಗಿ ಶಚ್ಚೀಂದ್ರ ಹೆಗ್ಡೆ, ಜಯಪ್ರಕಾಶ ಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಗೀತಾ ರಮೇಶ್, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ನಯನಾ ಶೆಟ್ಟಿ, ಖಜಾಂಚಿಗಳಾಗಿ ಜೆ.ಮಂಜುನಾಥ ಶೆಟ್ಟಿ, ವೆಂಕಟೇಶ ಪಟವರ್ಧನ್ ಅವರನ್ನು ಆಯ್ಕೆ ಮಾಡಲಾಗಿದೆ.

ಜಾತ್ರೆಯ ವಿವರ: ಡಿ.30ರಂದು ತುಂಗಾ ನದಿಯಲ್ಲಿರುವ ರಾಮಕೊಂಡದಲ್ಲಿ ತೀರ್ಥಸ್ನಾನ, 31ರಂದು ಶ್ರೀ ರಾಮೇಶ್ವರ ದೇವರ ರಥೋತ್ಸವ ಹಾಗೂ ಜ.1ರಂದು ಸಂಜೆ 6ಗಂಟೆಗೆ ತುಂಗಾನದಿಯಲ್ಲಿ ರಾಮೇಶ್ವರ ದೇವರ ತೆಪ್ಪೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net