

ಶಿವಮೊಗ್ಗ: ತಮ್ಮ ಆಪ್ತ ಶಾಖೆಯ ನೌಕರೊಬ್ಬರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ವಿಭಿನ್ನವಾಗಿ ಬೀಳ್ಕೊಡುಗೆ ನೀಡಿದ್ದಾರೆ. ನಿವೃತ್ತಿ ದಿನದಂದೇ ನೌಕರನಿಗೆ ತಮ್ಮ ಕೈಯಾರೆ ಸಿಹಿ ಊಟ ಬಡಿಸಿ ಮಾದರಿಯಾಗಿದ್ದಾರೆ.
ಪಾಲಿಕೆ ಕಮಿಷನರ್ ಆಪ್ತ ಶಾಖೆ ನೌಕರ ಕರಿಯಣ್ಣ ಸೋಮವಾರ ನಿವೃತ್ತರಾದರು. ಆಯುಕ್ತ ಕೆ. ಮಾಯಣ್ಣಗೌಡ ಅವರಿಗೆ ಕರಿಯಣ್ಣ ಅವರು ಪ್ರತಿ ದಿನ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದರು.
ಸೋಮವಾರ ಮಧ್ಯಾಹ್ನ ಆಯುಕ್ತ ಮಾಯಣ್ಣಗೌಡ ಅವರು ಕರಿಯಣ್ಣ ಅವರಿಗಾಗಿ ಸಿಹಿ ಊಟ ತರಿಸಿದರು. ಊಟಕ್ಕೆ ಬರುವಂತೆ ಕರೆದು ಅಪ್ಪುಗೆ ನೀಡಿ ತಾವು ಕೂರುತ್ತಿದ್ದ ಜಾಗದಲ್ಲಿ ಕರಿಯಣ್ಣ ಅವರನ್ನು ಕೂರಿಸಿ ಊಟ ಬಡಿಸಿದರು.
ಇನ್ನಷ್ಟು ಊಟ ಮಾಡಿ ಎಂದು ಒತ್ತಾಯಿಸಿದರು. ಕರಿಯಣ್ಣ ಅವರ ವೃತ್ತಿ ಜೀವನದ ಕೊನೆಯ ದಿನವನ್ನು ಆಯುಕ್ತರು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದರು. ಆಯುಕ್ತರ ನಡೆಗೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.