ಗೌರಿಬಿದನೂರು ವಾರ್ಡ್​ಗಳ ಸ್ವಚ್ಛತೆ ಪರಿಶೀಲಿಸಿದ ಆಯುಕ್ತ

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ನಗರಸಭೆ ಆಯುಕ್ತ ರಮೇಶ್​ ಮಂಗಳವಾರ ಬೆಳಗ್ಗೆ ನಗರದ ವಿವಿಧ ವಾರ್ಡ್​ಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ನಗರದ ವಿವಿಧ ರಸ್ತೆಗಳು ಸ್ವಚ್ಛತೆ ಕಾರ್ಯದಲ್ಲಿ ನಿರತರಾಗಿದ್ದ ಪೌರಕಾರ್ಮಿಕರೊಂದಿಗೆ ಚರ್ಚಿಸಿ ಮಾತನಾಡಿದರು.

ಪೌರಕಾರ್ಮಿಕರಿಂದ ನಗರದ ಸ್ವಚ್ಛತೆ ಕಾಪಾಡಲು ಸಾಧ್ಯವಿಲ್ಲ. ನಗರದ ನಾಗರಿಕರು ಸಹಕರಿಸಬೇಕು. ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಹಸಿ ಹಾಗೂ ಒಣ ಕಸಗಳಾಗಿ ವಿಂಗಡಿಸಿ ಮನೆ ಬಳಿಗೆ ಬರುವ ವಾಹನಗಳಿಗೆ ನೀಡಬೇಕು. ಮಾಂಸದಂಗಡಿಗಳು, ಹೋಟೆಲ್​ ಹಾಗೂ ಇತರ ವ್ಯಾಪಾರ ವಹಿವಾಟು ನಡೆಸುವವರು ಕೂಡ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದೇ ವಾಹನಗಳಿಗೆ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಅದೇ ರೀತಿ ಸಕಾಲಕ್ಕೆ ಎಲ್ಲರೂ ತೆರಿಗೆಗಳನ್ನು ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಬಳಿಕ ಪೌರಕಾರ್ಮಿಕರ ವಸತಿ ಗೃಹಗಳಿಗೆ ಭೇಟಿ ನೀಡಿದ ಪೌರಾಯುಕ್ತರು, ಪೌರಕಾರ್ಮಿಕರ ಕುಟುಂಬ ಮತ್ತು ಸದಸ್ಯರ ಜತೆಗೆ ಚರ್ಚಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅವಲೋಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net